ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಆರ್.ಟಿ.ನಗರದ ಸುಹೇಲ್ ಮನೆಯಲ್ಲಿ ಸೇರುತ್ತಿದ್ದ ಐವರು ಬಂಧಿತ ಶಂಕಿತ ಉಗ್ರರು
ಬೆಂಗಳೂರು: ಜು 19. ಬೆಂಗಳೂರಿನಲ್ಲಿ ಸೆರೆ ಸಿಕ್ಕಿರುವ ಐವರು ಶಂಕಿತ ಉಗ್ರರು ಆರ್.ಟಿ.ನಗರದಲ್ಲಿರುವ ಸುಹೇಲ್ ಮನೆಯಲ್ಲಿ ನಿತ್ಯ ಸಂಜೆ ಸೇರಿಕೊಂಡು ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.
ಬೆಂಗಳೂರಿನ ಆರ್‌ಟಿ ನಗರದ ಸೈಯದ್ ಸುಹೇಲ್, ಉಮರ್, ಜನಿದ್, ಮುದಾಸಿರ್ ಮತ್ತು ಜಾಹಿದ್ ಎಂಬವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಐವರು ಶಂಕಿತ ಉಗ್ರರು ಕರ್ನಾಟಕದಲ್ಲಿ ಸುಮಾರು 10 ಹೆಚ್ಚು ಕಡೆ ಭಾರೀ ಬಾಂಬ್ ಸ್ಫೋಟ ನಡೆಸುವ ಮೂಲಕ ದೊಡ್ಡ ರಕ್ತಪಾತ ನಡೆಸುವುದಕ್ಕೆ ಸಂಚು ರೂಪಿಸಿದ್ದರು ಎನ್ನುವ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಇನ್ನು ಈ ವಿಚಾರವು ಸುಹೇಲ್ ತಂದೆಗೆ ತಿಳಿದಿದ್ದರೂ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಕೆಲವು ಪೋಷಕರನ್ನು ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ.
ಟಿ.ನಾಸೀರ್ ಎಂಬಾತ ಈ ಐವರು ಶಂಕಿತರಿಗೆ ಪ್ರೇರಣೆ ನೀಡಿದ್ದು, ಈತ 2008ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ. ಆಗಿನಿಂದಲೂ ಈತ ಜೈಲಿನಲ್ಲಿ ಇದ್ದಾನೆ.