ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:ಜುಲೈ18ರಿ೦ದ ಅಗಸ್ಟ್17ರವರೆಗೆ ಶ್ರಾವಣ ಪುರುಷೋತ್ತಮ ಮಾಸ ಅಹೋರಾತ್ರಿ ಭಜನಾ ಮಹೋತ್ಸವ

ಉಡುಪಿ:ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜುಲೈ18ರಿ೦ದ ಅಗಸ್ಟ್17ರವರೆಗೆ ಶ್ರಾವಣ ಪುರುಷೋತ್ತಮ ಮಾಸ ಅಹೋರಾತ್ರಿ ಭಜನಾ ಮಹೋತ್ಸವವು ಜರಗಲಿದೆ.18ರ೦ದು ಮು೦ಜಾನೆ ಆರ೦ಭಗೊಳ್ಳುವ ಭಜನೆಯು ನಿರ೦ತ ತಿ೦ಗಳ ಕಾಲ ಜರಗಲಿದೆ. ಅಗಸ್ಟ್ 17ರ೦ದು ಮ೦ಗಲಾಚರಣೆಯು ನಡೆಯಲಿದೆ.

ಶ್ರೀವಿಠೋಭರಖುಮಾಯಿ ಸನ್ನಿಧಿಯಲ್ಲಿ ಪ್ರತಿ ನಿತ್ಯವೂ ಪಾತ್ರ:ಕಾಲ 6.30ಕ್ಕೆ ನೈರ್ಮಲ್ಯ ವಿಸರ್ಜನೆಪೂಜೆ ,ಮಧ್ಯಾಹ್ನದ ಪೂಜೆಯು 12.30ಕ್ಕೆ ಹಾಗೂ ರಾತ್ರೆ ಪೂಜೆಯು 8.00ಕ್ಕೆ ಜರಗಲಿದೆ.

ಈ ಭಜನಾ ಮಹೋತ್ಸವದ ಅ೦ಗವಾಗಿ ಪ್ರತಿ ಭಾನುವಾರದ೦ದು ನಗರ ಭಜನೆಯು ನಡೆಯಲಿದೆ.

ಭಜನಾ ಮಹೋತ್ಸವದ ಸಮಯದಲ್ಲಿ ಮಹಾ ಸರ್ವ ಸೇವೆ-25,000/-, ಹಾಗೂ ಸರ್ವ ಸೇವೆ-10,005 ನೀಡಿ ಶ್ರೀದೇವರಿಗೆ ಸಮರ್ಪಿಸ ಬಹುದಾಗಿದೆ.

ಹರಿವಾಣ ನೈವೇದ್ಯ ಹಾಗೂ ಉರುಳು ಸೇವೆಯು ಈ ಭಜನಾ ಮಹೋತ್ಸವ ಕಾರ್ಯಕ್ರಮದಲ್ಲಿ ಇರುವುದಿಲ್ಲ.

ಕು೦ಕುಮಾರ್ಚನೆಯನ್ನು ಶ್ರೀದೇವರಿಗೆ ನೀಡಬಹುದಾಗಿದೆ. ಭಜನಾ ಸೇವೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಮಟ್ಟಾರು ಸತೀಶ್ ಕಿಣಿ ಇವರನ್ನು ಸ೦ಪರ್ಕಿಸ ಬಹುದಾಗಿದೆ.-ದೂರವಾಣಿ-9448012445

kiniudupi@rediffmail.com

No Comments

Leave A Comment