ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಶಿರಬೀಡು ವಾರ್ಡ್ ನಲ್ಲಿ ಶಿಥಿಲಗೊಂಡ ಸಣ್ಣ ಸೇತುವೆ ದುರಸ್ಥಿಗೆ ಸುರೇಶ್ ಬನ್ನ೦ಜೆ ಆಗ್ರಹ
ಉಡುಪಿ:ಉಡುಪಿ ಶಿರಬೀಡು ವಾರ್ಡ್ ನಲ್ಲಿ ಶಿಥಿಲಗೊಂಡ ಸಣ್ಣಸೇತುವೆ ಈ ಸೇತುವೆ ಮೇಲೆ ಪ್ರತಿನಿತ್ಯವೂ ನೂರಾರು ಜನರು ಸಂಚಾರಿಸುತ್ತಿದ್ದು ದ್ವಿಚಕ್ರ ವಾಹನ ಸವಾರರು ಕೂಡ ಈ ಸೇತುವೆ ಮೇಲಿಂದ ಸಂಚರಿಸುತ್ತಾರೆ ಈ ಸೇತುವೆಯ ಉಡುಪಿ ಬಸ್ ಸ್ಟ್ಯಾಂಡ್ ನಿಂದ ತಾಲೂಕ ಆಫೀಸ್ ಗೆ ಒಳದಾರಿಯಾಗಿರುತ್ತದೆ.
ಮಾತ್ರವಲ್ಲದೆ ಅಂಬಲಪಾಡಿ ದೇವಸ್ಥಾನಕ್ಕೆ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೈಂಟ್ ಸಿಸಿಲಿಸ್ ಕಾನ್ವೆಂಟ್ ಶಾಲೆಗೆ ಇದು ಒಳದಾರಿಯಾಗಿದ್ದು ದಿನನಿತ್ಯ ನೂರಾರು ಜನ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಈ ಸೇತುವೆ ಮೇಲೆ ಜನರು ಹೋಗಲು ಭಯಪಡುತ್ತಿದ್ದು ಉಡುಪಿ ನಗರ ವ್ಯಾಪ್ತಿಯ ಮಳೆ ನೀರು ಈ ತೋಡಿನಲ್ಲಿ ಹರಿದು ಹೋಗುತ್ತಿದ್ದು ದಿನನಿತ್ಯ ಈ ಪರಿಸರದಲ್ಲಿ ನೆರೆ ಉಂಟಾಗುತ್ತಿದ್ದು ಈ ಸೇತುವೆ ಯಾವ ಸಂದರ್ಭದಲ್ಲಿ ನೀರು ಪಾಲಾಗುವುದು ಎಂದು ಜನರು ಹೆದರಿಕೆಯಲ್ಲಿ ಈ ಸೇತುವೆಯನ್ನು ದಾಟಿಕೊಂಡು ಹೋಗುವ ಪರಿಸ್ಥಿತಿ ಇದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.
ಈ ಹಿಂದೆ ನಗರಸಭಾ ಅಧಿಕಾರಿಗಳಿಗೆ ದೂರನ್ನು ನೀಡಿದ್ದು ಯಾರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅಷ್ಟು ಮಾತ್ರವಲ್ಲದೆ ಸ್ಥಳೀಯ ನಗರಸಭಾ ಸದಸ್ಯರು ಕೂಡ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಉಡುಪಿ ಜಿಲ್ಲಾಧಿಕಾರಿಯವರು ಕೂಡಲೇ ಈ ಸೇತುವೆಯ ದುರಸ್ತಿಯ ಕಾರ್ಯವನ್ನು ಕೈಗೆತ್ತಿಕೊಂಡು ಜನಸಾಮಾನ್ಯರ ಪ್ರಾಣವನ್ನು ಉಳಿಸಿಕೊಡುವ ಕೆಲಸವನ್ನು ಮಾಡಬೇಕಾಗಿದೆ ಎಂದು ಸುರೇಶ್ ಶೆಟ್ಟಿ ಬನ್ನಂಜೆ ಜಿಲ್ಲಾಧಿಕಾರಿಯರಲ್ಲಿ ಮನವಿಯನ್ನು ಮಾಡಿರುತ್ತಾರೆ.