ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ದೆಹಲಿಯಲ್ಲಿ ಮತ್ತೊಂದು ಬರ್ಬರ ಕೊಲೆ: ಯುವತಿಯ ತುಂಡು-ತುಂಡಾದ ದೇಹ ಪತ್ತೆ

ನವದೆಹಲಿ: ಕಳೆದ ವರ್ಷ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇನ್ನೂ ಹಸಿರಾಗಿರುವಂತೆಯೇ ದೆಹಲಿಯಲ್ಲಿ ಅಂತಹುದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರ ತುಂಡು-ತುಂಡಾದ ದೇಹ ಪತ್ತೆಯಾಗಿದೆ.

ದೆಹಲಿ ಪೊಲೀಸರು ಇಂದು ಗೀತಾ ಕಾಲೋನಿಯ ಫ್ಲೈಓವರ್ ಬಳಿ ಮಹಿಳೆಯೊಬ್ಬಳ ದೇಹದ ಭಾಗಗಳನ್ನು ಪತ್ತೆ ಮಾಡಿದ್ದು, ಮಹಿಳೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ಹಾಕಲಾಗಿದೆ. ಪ್ರಸ್ತುತ ದೇಹದ ತುಂಡುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಕಳೆದ ವರ್ಷ, 27 ವರ್ಷದ ಕಾಲ್ ಸೆಂಟರ್ ಉದ್ಯೋಗಿ ಶ್ರದ್ಧಾ ವಾಲ್ಕರ್ ಅವರ ಲೈವ್-ಇನ್ ರಿಲೇಷನ್ ಫಿಪ್ ಪಾಲುದಾರ ಆಫ್ತಾಬ್ ಪೂನಾವಾಲಾ ಕತ್ತು ಹಿಸುಕಿ, ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ 18 ದಿನಗಳ ಕಾಲ ಕಾಡಿನಲ್ಲಿ ಎಸೆದಿದ್ದ. ದೇಹದ ಕೆಲವು ಭಾಗಗಳನ್ನು ಫ್ರಿಡ್ಜ್‌ನಲ್ಲಿ ಶೇಖರಿಸಿಟ್ಟು ಆಕೆಯ ಗುರುತನ್ನು ಮರೆಮಾಚಲು ಆಕೆಯ ಮುಖವನ್ನು ಸುಟ್ಟು ಹಾಕಿದ್ದ.

ಆರು ತಿಂಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿತು, ವಾಕರ್ ಅವರ ತಂದೆ ತಿಂಗಳುಗಟ್ಟಲೆ ಅವಳನ್ನು ಸಂಪರ್ಕಿಸಲು ವಿಫಲವಾದ ನಂತರ ಕಾಣೆಯಾದ ಕುರಿತು ದೂರು ದಾಖಲಿಸಿದ್ದರು. ಅಫ್ತಾಬ್ ಪೂನಾವಾಲಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು ಮತ್ತು ಕೊಲೆ ಮತ್ತು ಸಾಕ್ಷ್ಯನಾಶದ ಆರೋಪ ಹೊರಿಸಿದ್ದರು.

No Comments

Leave A Comment