ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಹಂಗಾರಕಟ್ಟೆಯ ಚೇತನಾ ಪ್ರೌಢಶಾಲೆಯಲ್ಲಿ ವನಮಹೋತ್ಸವ
ಉಡುಪಿ:ಬ್ರಹ್ಮಾವರದ ಹಂಗಾರಕಟ್ಟೆಯ ಚೇತನಾ ಪ್ರೌಢ ಶಾಲೆಯಲ್ಲಿ ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಔಷಧಿಯ ಸಸ್ಯಗಳನ್ನು ವಿದ್ಯಾರ್ಥಿಗಳಿಂದ ನೆಡಿಸಿ ವೃಕ್ಷಾರೋಪಣ ಮತ್ತು ವನಮಹೋತ್ಸವವನ್ನು ಆಚರಿಸಲಾಯಿತು ಇದೇ ಸ೦ದರ್ಭದಲ್ಲಿ ಆರೋಗ್ಯ ಭಾರತಿಯಿಂದ ಪ್ರಕಟಿತ ” ಬಾಲೋಪಚಾರ – ನಮ್ಮ ಆರೋಗ್ಯ ನಮ್ಮ ಕೈಯಲ್ಲಿ” ಕೈಪಿಡಿಯನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಯಿತು .
ಸಮಾರ೦ಭದಲ್ಲಿ ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಪ್ರಭಾಕರ ಭಟ್, ಗಿಡಗಳ ಪ್ರಾಯೋಜಕರಾದ ಭಾರತ್ ವಿಕಾಸ ಪರಿಷತ್ ನ ಉಡುಪಿ ಭಾರ್ಗವ ಶಾಖೆಯ ಕಾರ್ಯದರ್ಶಿ ಗಳಾದ ಎಸ್ ಎಸ್ ಶೆಣೈ ಮತ್ತು ಬಿವಿಪಿಯ ಸದಸ್ಯರು ಮತ್ತು ಭಾರತೀಯ ಮಜ್ದೂರ್ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ರತ್ನಾಕರ ದೇವಾಡಿಗ , ಶಾಲಾ ಮುಖ್ಯೋಪಾಧ್ಯಾಯಿನಿ ಕಲ್ಪನಾ ಶೆಟ್ಟಿ , ನಿವೃತ್ತ ಶಿಕ್ಷಕಿ ಮತ್ತು ಮಕ್ಕಳ ಹಕ್ಕಿಗಾಗಿ ಕಾರ್ಯ ಮಾಡುತ್ತಿರುವ ಸಮಾಜಸೇವಕಿ ತಿಲೋತ್ತಮಾ ನಾಯಕ್ ಉಪಸ್ಥಿತರಿದ್ದರು ಹಾಗೂ ಶಾಲೆಯ ಶಿಕ್ಷಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು .