ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಚಿಕ್ಕಬಳ್ಳಾಪುರ: ಬೈಕ್-ಸ್ಕೂಟಿಗೆ ಟೆಂಪೊ ಡಿಕ್ಕಿ, ದಂಪತಿ ಸ್ಥಳದಲ್ಲೇ ಸಾವು, ಮಕ್ಕಳಿಗೆ ಗಾಯ

ಚಿಕ್ಕಬಳ್ಳಾಪುರ: ಬೈಕ್ ಹಾಗೂ ಸ್ಕೂಟಿಗೆ ಟೊಮೆಟೊ ತುಂಬಿದ ಟೆಂಪೊ ಡಿಕ್ಕಿ (Accident) ಹೊಡೆದು ದಂಪತಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಾಚಹಳ್ಳಿ ಬಳಿ ನಡೆದಿದೆ. ಶ್ಯಾಮಲಾ (35) ಮತ್ತು ಶ್ರೀರಾಮ್ (40) ಮೃತ ದಂಪತಿ. ಘಟನೆಯಲ್ಲಿ ದಂಪತಿಯ ಮೂವರು ಮಕ್ಕಳು ಗಾಯಗೊಂಡಿದ್ದು, ಈ ಪೈಕಿ ಒಂದು ಮಗು ಗಂಭೀರವಾಗಿ ಗಾಯಗೊಂಡಿದೆ. ಸದ್ಯ ಮಕ್ಕಳನ್ನು ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋಲಾರ ಕಡೆಯಿಂದ ಚಿಂತಾಮಣಿ ಕಡೆಗೆ ದಂಪತಿ ಪ್ರತ್ಯೇಕ ವಾಹನದಲ್ಲಿ ಬರುತ್ತಿದ್ದರು. ಒಂದು ಮಗುವಿನ ಜೊತೆ ಶ್ಯಾಮಲ ಸ್ಕೂಟಿಯಲ್ಲಿ ಹಾಗೂ ಇಬ್ಬರು ಮಕ್ಕಳೊಂದಿಗೆ ಶ್ರೀರಾಮ್ ಬೈಕ್​ನಲ್ಲಿ ಹೋಗುತ್ತಿದ್ದರು. ಈ ವೇಳೆ ಮುಂಭಾಗದಿಂದ ಬಂದ ಟೊಮೆಟೊ ತುಂಬಿದ ಟೆಂಪೊ ಸ್ಕೂಟಿ ಹಾಗೂ ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಶ್ಯಾಮಲ ಮತ್ತು ಶ್ರೀರಾಮ್ ಟೆಂಪೊ ಅಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರು ಮಕ್ಕಳಿಗೆ ಗಾಯಗಳಾಗಿದ್ದು, ಈ ಪೈಕಿ ಒಂದು ಮಗುವಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಮಕ್ಕಳನ್ನು ಕೋಲಾರದ ಎಸ್​ಎನ್​ಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಅಪಘಾತದಲ್ಲಿ ಹೊತ್ತಿ ಉರಿದ ಟೆಂಪೊ, ಸವಾರ ಪರಾರಿ
ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಟೆಂಪೊ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದಿದೆ. ಪ್ರಾಣಾಪಾಯದಿಂದ ಪಾರಾದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಟೆಂಪೊಗೆ ಹತ್ತಿಕೊಂಡ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಚಿಂತಾಮಣಿ ಎಎಸ್​ಪಿ ಕುಶಾಲ್ ಚೌಕ್ಸಿ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

No Comments

Leave A Comment