ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಮಣಿಪುರ: ಹೆದ್ದಾರಿ ದಿಗ್ಬಂದನ ತೆರವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಂಡಾಯ ನಾಯಕನ ಮನೆಗೆ ಬೆಂಕಿ!
ಇಂಫಾಲ್: ಮಣಿಪುರ ರಾಜ್ಯದ ಜೀವನಾಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ದಿಗ್ಬಂಧನವನ್ನು ಹಿಂತೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ ಶಾಂತಿಯುತ ಮಾರ್ಗದ ನಾಯಕರೊಬ್ಬರ ಮನೆಗೆ ದುಷ್ಕರ್ಮಿಗಳು ಸೋಮವಾರ ಬೆಂಕಿ ಹಚ್ಚಿದ್ದಾರೆ.
ಚುರಾಚಂದ್‌ಪುರದ ಬೆಟ್ಟದ ಜಿಲ್ಲೆಯಲ್ಲಿರುವ ಕುಕಿ ರಾಷ್ಟ್ರೀಯ ಸಂಘಟನೆಯ ವಕ್ತಾರರಾಗಿರುವ ಡಾ.ಸೈಲೆನ್ ಹಾಕಿಪ್ ಅವರ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಇದು ಕೆಲ ಬಂಡಾಯಗಾರರ ಗುಂಪುಗಳ ಸಂಘಟಿತವಾಗಿದೆ.
ಬೆಂಕಿ ಹೊತ್ತಿಕೊಂಡಾಗ ಮನೆಯಲ್ಲಿ ಯಾರೂ ಇರಲಿಲ್ಲ. ದುಷ್ಕರ್ಮಿಗಳಿಂದ ಈ ದಾಳಿ ನಡೆದಿದೆ ಹೊರತು ಉದ್ರಿಕ್ತ ಜನರಿಂದ ಆಗಿಲ್ಲ ಎಂದು ಹಾಕಿಪ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಆನ್ ಲೈನ್ ಗೆ ತಿಳಿಸಿದ್ದಾರೆ. ತನ್ನ ಹೆಸರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಮೇಸೆಜ್ ಹಾಕಲಾಗುತ್ತಿದೆ ಎಂದು ಹಾಕಿಪ್ ಸ್ಪಷ್ಪಪಡಿಸಿದ ನಂತರ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ. ಅಸ್ಸಾಂ ಮತ್ತು ಭಾರತ ಸರ್ಕಾರದ ಹಿರಿಯ ರಾಜಕೀಯ ಪದಾಧಿಕಾರಿಗಳು ಮತ್ತು ಕುಕಿ ಮುಖಂಡರ ನಡುವಿನ ಗೌಪ್ಯ ಸಭೆಯ ಮಾಹಿತಿ ಇದಾಗಿತ್ತು.
ಕೋಮು ಸೌಹಾರ್ದತೆಗೆ ಅಡ್ಡಿಯುಂಟುಮಾಡುವುದರ ಜೊತೆಗೆ ತಪ್ಪು ತಿಳುವಳಿಕೆ ಮತ್ತು ವಿವಾದವನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿರುವ ಕಾರಣ ಈ ವಿಷಯದ ಬಗ್ಗೆ ನನ್ನ ನಿಲುವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ.” ಕುಕಿ ನಾಗರಿಕ ಸಮಾಜ ಸಂಘಟನೆಗಳು, ಚುನಾಯಿತ ಪ್ರತಿನಿಧಿಗಳು ಮತ್ತು ಮುಖಂಡರು ಆಗಾಗ್ಗೆ ಹಿರಿಯ ರಾಜಕೀಯ ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದು, ಮಣಿಪುರದಲ್ಲಿ ಪ್ರಸ್ತುತ ಇರುವ ಭದ್ರತಾ ಸನ್ನಿವೇಶ ಮತ್ತು ಕುಕಿ-ಝೋ ಮತ್ತು ಮೈಟೈ ಸಮುದಾಯಗಳ ನಡುವೆ ಇರುವ ನಂಬಿಕೆಯ ಕೊರತೆಯ ಬಗ್ಗೆ ತಮ್ಮ ನಿಲುವನ್ನು ತಿಳಿಸಿರುವುದಾಗಿ ಅವರು ಹೇಳಿದರು.
ಕುಕಿಗಳ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರ ತಿಳಿದಿದ್ದು, ಸಮಸ್ಯೆಯ ತ್ವರಿತ ಪರಿಹಾರದಲ್ಲಿ ತನ್ನ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದೆ ಎಂದು ಅವರು ಹೇಳಿದರು.