ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಖ್ಯಾತ ಬಾಡಿಬಿಲ್ಡರ್ ಜೋ ಲಿಂಡ್ನರ್ ನಿಧನ
ಬ್ಯಾಂಕಾಕ್: ಬಾಡಿಬಿಲ್ಡರ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಖ್ಯಾತರಾಗಿದ್ದ ಜೋ ಲಿಂಡ್ನರ್ (30) ನಿಧನರಾಗಿದ್ದಾರೆ.
ರಕ್ತನಾಳ ಸಮಸ್ಯೆಯಿಂದ ಬಳಲುತ್ತಿದ್ದ ಜೋ ಲಿಂಡ್ನರ್ ಅವರು ಶನಿವಾರ ನಿಧನರಾಗಿದ್ದಾರೆ ಎಂದು ಅವರ ಗೆಳತಿ ನಿಚಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
2 ದಿನಗಳ ಹಿಂದೆಯಷ್ಟೇ ಆರೋಗ್ಯಕರ ದೇಹದಾರ್ಢ್ಯ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದ ಜೋ ಲಿಂಡ್ನರ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಫಿಟ್ನೆಸ್ ಕುರಿತ ಹಲವು ವಿಡಿಯೋ ಹಂಚಿಕೊಂಡಿದ್ದರು.
ಪ್ರತಿದಿನ ಯುಟ್ಯೂಬ್‌ನಲ್ಲಿ ಫಿಟ್ನೆಸ್ ತರಬೇತಿ, ಆಹಾರ ಕ್ರಮದ ಬಗ್ಗೆಯೂ ಸಲಹೆ ನೀಡುತ್ತಿದ್ದ ಜೋ ಲಿಂಡ್ನರ್ ಅವರು, ಯುಟ್ಯೂಬ್‌ನಲ್ಲಿ 9,40,000 ಚಂದಾದಾರರು ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ 8.5 ದಶಲಕ್ಷ ಫಾಲೋವರ್ಸ್ ಗಳನ್ನ ಹೊಂದಿದ್ದಾರೆ.