ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಮಂಡ್ಯ: ಟಾಟಾ ಹೆಕ್ಸಾ ಹಾಗೂ ಸ್ವಿಫ್ಟ್ ಡಿಜೈರ್ ನಡುವೆ ಭೀಕರ ಅಪಘಾತ; ಸ್ವಿಫ್ಟ್ ಕಾರಿನಲ್ಲಿದ್ದ ಮೂವರ ದುರ್ಮರಣ

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು ಸ್ವಿಫ್ಟ್ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ಬಳಿಯ ಕಿಟ್ಟಿ ಡಾಬಾ ಬಳಿ ಟಾಟಾ ಹೆಕ್ಸಾ ಹಾಗೂ ಸ್ವಿಫ್ಟ್ ಡಿಜೈರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಸ್ವಿಫ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ.

ಮೃತರನ್ನು ಉತ್ತರ ಪ್ರದೇಶದ 50 ವರ್ಷದ ನೀರಜ್ ಕುಮಾರ್ ಅವರ ಪತ್ನಿ 47 ವರ್ಷದ ಸೆಲ್ವಿ ಮತ್ತು ಮಂಡ್ಯದ ಕಾರು ಚಾಲಕ 35 ವರ್ಷದ ನಿರಂಜನ್ ಎಂದು ತಿಳಿದುಬಂದಿದೆ. ನೀರಜ್ ಕುಮಾರ್ ಹಾಗೂ ಪತ್ನಿ ಬೆಂಗಳೂರಿನಿಂದ ಮೈಸೂರಿಗೆ ಬಾಡಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಟಾಟಾ ಹೆಕ್ಸಾ ಕಾರಿನಲ್ಲಿದ್ದ ಪತಿ-ಪತ್ನಿಗೆ ಗಂಭೀರ ಗಳಾಗಿದ್ದು ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

No Comments

Leave A Comment