ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ರಾಜ್ಯ ಕಾಂಗ್ರೆಸ್ ಪಕ್ಷದ ಸರಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದರಿಂದ ಕಂಗೆಟ್ಟ ಬಿಜೆಪಿ ನಾಯಕರು ಮೈಮೈ ಪರೋಚಿಕೊಳ್ಳುತ್ತಿದ್ದಾರೆ. ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ: ನಮ್ಮ ರಾಜ್ಯದ ಆಡಳಿತವನ್ನು ವಹಿಸಿಕೊಂಡ ನಮ್ಮ ಕಾಂಗ್ರೆಸ್ ಪಕ್ಷವು ಈ ಹಿಂದೆ ಅಧಿಕಾರಕ್ಕೆ ಬರುವ ಮೊದಲು ಏನು ಭರವಸೆಗಳನ್ನು ನೀಡಿತ್ತು ಅದೇ ರೀತಿಯಲ್ಲಿ ಏನು ಗ್ಯಾರೆಂಟಿಗಳು ನೀಡಿದೆವು ಎಲ್ಲಾ ಐದು ಗ್ಯಾರಂಟಿಗಳನ್ನು ಇದೀಗ ಜಾರಿಯಾಗಿದ್ದು ರಾಜ್ಯದ ಜನರು ಸಂತೋಷದಿಂದ ಇದನ್ನು ಒಪ್ಪಿಕೊಂಡಿದ್ದು ಇದು ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ ಇದರಿಂದಾಗಿ ಕಂಗೆಟ್ಟ ಬಿಜೆಪಿ ನಾಯಕರು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವು ಸಂಪೂರ್ಣವಾಗಿ ಮೂಲೆಗುಂಪಾಗುವುದು ಖಚಿತ ಎಂದು ತಿಳಿದು ಮನ ಬಂದಂತೆ ಮಾತನಾಡುತ್ತಾ ಕೋಮು ದ್ವೇಷದ ಹೆಸರಲ್ಲಿ ನಮ್ಮ ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ.
ಆದರೆ ನಮ್ಮ ರಾಜ್ಯದ ಜನರು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಸನ್ಮಾನ್ಯ ಡಿ ಕೆ ಶಿವಕುಮಾರ್ ಇವರ ಬೆಂಬಲಕ್ಕೆ ನಿಂತಿದ್ದು ಈ ಬಿಜೆಪಿ ನಾಯಕರಿಗೆ ಏನು ಮಾಡಲು ತೋಚದೆ ತಾವೇ ಮೈ ಮೈ ಪರಚಿ ಕೊಳ್ಳುತ್ತಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ