ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಉಡುಪಿಯ ಹಿರಿಯ ಲೆಕ್ಕಪರಿಶೋಧಕ ಯು.ಕೆ.ಮಯ್ಯ ನಿಧನ
ಉಡುಪಿ: ಹಿರಿಯ ಲೆಕ್ಕಪರಿಶೋಧಕ, ಅಜ್ಜರಕಾಡು ಅಗ್ನಿಶಾಮಕ ದಳ ಕಚೇರಿ ಬಳಿಯ ನಿವಾಸಿ ಯು.ಕೆ. ಮಯ್ಯ (ಕೃಷ್ಣಮೂರ್ತಿ ಮಯ್ಯ) ಭಾನುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಮೃತರು ಉಡುಪಿ ಜಿಲ್ಲೆಯ ಪ್ರಥಮ ಲೆಕ್ಕಪರಿಶೋಧಕರು ಎಂಬ ಖ್ಯಾತಿ ಪಡೆದಿದ್ದರು. ಉಡುಪಿ ವಿದ್ಯಾರತ್ನ ಕಟ್ಟಡದಲ್ಲಿ ಕಚೇರಿ ಪ್ರಾರಂಭಿಸಿದ್ದರು.
ಅವರ ಮಾರ್ಗದರ್ಶನದಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು ಲೆಕ್ಕಪರಿಶೋಧಕರಾಗಿ ಹೊರಹೊಮ್ಮಿದ್ದಾರೆ.
ಮಣಿಪಾಲ ಗ್ರೂಪ್ ಆಫ್ ಸಂಸ್ಥೆಯಲ್ಲಿ ಹಲವಾರು ವರ್ಷ ಕಾಲ ಲೆಕ್ಕಪರಿಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಪರ್ಯಾಯ ಕೃಷ್ಣಪುರ ಮಠದ ಲೆಕ್ಕಪರಿಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.