ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ನೂತನ ಸಚಿವರಿಗೆ ಖಾತೆ ಹಂಚಿಕೆ: ಸಿದ್ದುಗೆ ಹಣಕಾಸು, ಡಿಕೆಶಿಗೆ ಜಲಸಂಪನ್ಮೂಲ, ಪರಂಗೆ ಗೃಹ ಇಲಾಖೆ
ಬೆಂಗಳೂರು: ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಅಧಿಕೃತವಾಗಿ ಖಾತೆ ಹಂಚಿಕೆ ಮಾಡಲಾಗಿದೆ. ಹಣಕಾಸು, ವಾರ್ತೆ ಮತ್ತು ಗುಪ್ತಚರ ಇಲಾಖೆಯನ್ನು ಮುಖ್ಯಮಂತ್ರಿಯೇ ಇಟ್ಟುಕೊಂಡಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮಹತ್ವದ ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ ಖಾತೆ ದೊರೆತಿದೆ.
ಉಳಿದಂತೆ ಖಾತೆಗಳ ವಿವರ ಹೀಗಿದೆ:
ಡಾ. ಜಿ. ಪರಮೇಶ್ವರ್- ಗೃಹ, ಹೆಚ್ ಕೆ ಪಾಟೀಲ್- ಸಣ್ಣ ನೀರಾವರಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರ, ಕೆ.ಹೆಚ್ ಮುನಿಯಪ್ಪ- ಆಹಾರ ಮತ್ತು ನಾಗರಿಕ ಪೂರೈಕೆ, ಕೆ. ಜೆ ಜಾರ್ಜ್ – ಇಂಧನ, ಎಂಬಿ ಪಾಟೀಲ್- ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮತ್ತು ಐಟಿ ಬಿಟಿ, ರಾಮಲಿಂಗಾರೆಡ್ಡಿ- ಸಾರಿಗೆ, ಸತೀಶ್ ಜಾರಕಿಹೊಳಿ- ಲೋಕೋಪಯೋಗಿ ಇಲಾಖೆ, ಪ್ರಿಯಾಂಕ್ ಖರ್ಗೆ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಜಮೀರ್ ಅಹ್ಮದ್- ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ, ಕೃಷ್ಣ ಬೈರೇಗೌಡ- ಕಂದಾಯ, ದಿನೇಶ್ ಗುಂಡೂರಾವ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಚಲುವರಾಯ ಸ್ವಾಮಿ- ಕೃಷಿ, ಕೆ. ವೆಂಕಟೇಶ್- ಪಶು ಸಂಗೋಪನಾ ಮತ್ತು ರೇಷ್ಮೆ, ಹೆಚ್.ಸಿ. ಮಹಾದೇವಪ್ಪ- ಸಮಾಜ ಕಲ್ಯಾಣ, ಈಶ್ವರ್ ಖಂಡ್ರೆ- ಅರಣ್ಯ ಮತ್ತು ಪರಿಸರ, ಎನ್ ರಾಜಣ್ಣ- ಸಹಕಾರ, ಶರಣಬಸಪ್ಪ ದರ್ಶನ್ ಪುರ್- ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳು, ಶಿವಾನಂದ ಪಾಟೀಲ್- ಜವಳಿ, ಸಕ್ಕರೆ ಮತ್ತು ಎಪಿಎಂಸಿ, ಆರ್. ಬಿ.ತಿಮ್ಮಾಪುರ್ ಅಬಕಾರಿ-ಮುಜರಾಯಿ, ಎಸ್ ಎಸ್ ಮಲ್ಲಿಕಾರ್ಜುನ್- ಗಣಿ ಮತ್ತು ಭೂವಿಜ್ಞಾನ, ಶಿವರಾಜ್ ತಂಗಡಗಿ- ಹಿಂದುಳಿದ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಶರಣ ಪ್ರಕಾಶ್ ಪಾಟೀಲ್- ಉನ್ನತ ಶಿಕ್ಷಣ, ಮಂಕಾಳ ವೈದ್ಯ- ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ, ಲಕ್ಷ್ಮಿ ಹೆಬ್ಬಾಳ್ ಕರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಹೀಂಖಾನ್- ಪೌರಾಡಳಿತ ಮತ್ತು ಹಜ್, ಡಿ.ಸುಧಾಕರ್- ಮೂಲಸೌಕರ್ಯ ಅಭಿವೃದ್ಧಿ, ಯೋಜನಾ ಮತ್ತು ಸಾಂಖ್ಯಿಕ ಇಲಾಖೆ, ಸಂತೋಷ್ ಲಾಡ್- ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿ, ಎನ್ ಎಸ್ ಬೋಸ್ ರಾಜ್- ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ, ಬೈರತಿ ಸುರೇಶ್- ನಗರಾಭಿವೃದ್ಧಿ, ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಎಂ.ಸಿ ಸುಧಾಕರ್- ವೈದ್ಯಕೀಯ ಶಿಕ್ಷಣ, ಕೆ.ಎನ್ ರಾಜಣ್ಣ- ಸಹಕಾರ, ಶಿವಾನಂದ ಪಾಟೀಲ್- ಜವಳಿ, ಸಕ್ಕರೆ ಮತ್ತು ಎಪಿಎಂಸಿ, ಬಿ. ನಾಗೇಂದ್ರ- ಯುವಜನ ಸೇವೆ, ಕ್ರೀಡೆ ಮತ್ತು ಸಂಸ್ಕೃತಿ ಖಾತೆ