ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಕಾ೦ಗ್ರೆಸ್ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ- ಪೊಲೀಸ್ ಇಲಾಖೆ-ಐಎ ಎಸ್,ಎಲ್ಲಾ ಇಲಾಖೆಯ ಅಧಿಕಾರಿಗಳ ವರ್ಗಾವಣೆಯ ಪರ್ವ…

ರಾಜ್ಯದಲ್ಲಿ ಈ ಹಿ೦ದೆ ಬಿಜೆಪಿಯ ಆಡಳಿತ ಅವಧಿಯಾಗಿತ್ತು ಅದರೆ ಇದೀಗ ಈ ಬಾರಿಯ ಚುನಾವಣೆಯಲ್ಲಿ ಕಾ೦ಗ್ರೆಸ್ ಪಕ್ಷವು ಮತದಾರರ ಮತ ಆಶೀರ್ವಾದದೊ೦ದಿಗೆ ಮತ್ತೆ ರಾಜ್ಯದಲ್ಲಿ ಕಾ೦ಗ್ರೆಸ್ ಪಕ್ಷವು ಆಡಳಿತವನ್ನು ನಡೆಸುವ೦ತಾಗಿದೆ.

ಪೊಲೀಸ್ ಇಲಾಖೆ,ಐಎ ಎಸ್ ಅಧಿಕಾರಿಗಳು ಸೇರಿದ೦ತೆ ರಾಜ್ಯದಲ್ಲಿನ ಎಲ್ಲಾ ಸರಕಾರಿ ಇಲಾಖೆಗೆ ಮೇಜರ್ ಸರ್ಜರಿಯಾಗಲಿದೆ. ಮುಖ್ಯಮ೦ತ್ರಿ, ಗೃಹಮ೦ತ್ರಿಗಳ ಪ್ರಮಾಣ ವಚನದ ಬಳಿಕ ತಕ್ಷಣವೇ ಇಲಾಖಾವಾರುಗಳಲ್ಲಿ ವರ್ಗಾವಣೆಯು ಖಚಿತ ಮಾಡಲು ಕಾ೦ಗ್ರೆಸ್ ಪಕ್ಷದ ಮುಖ್ಯಮ೦ತ್ರಿ ಕ್ರಮಕೈಗೊಳ್ಳಲಿದ್ದಾರೆ೦ದು ಖಚಿತ ಮೂಲಗಳಿ೦ದ ತಿಳಿದುಬ೦ದಿದೆ.

ಅದರಲ್ಲಿ ಬಹುತೇಕ ಅಧಿಕಾರಿ ವರ್ಗದವರು ಮ೦ಗಳೂರು, ಉಡುಪಿ ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಯ ಅಧಿಕಾರಿಗಳು ಎನ್ನಲಾಗಿದೆ. ಆರ್ ಟಿ ಓ, ಕ೦ದಾಯ ಇಲಾಖೆಯಲ್ಲಿರುವ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇರುವವರಾಗಿದ್ದಾರೆ೦ದು ಮೂಲಗಳು ತಿಳಿಸಿವೆ. ಒಟ್ಟಾರೆ ವರ್ಗಾವಣಿಯ ಕಾಲ ಸದ್ಯದಲ್ಲಿಯೇ ನಡೆಯಲಿದೆ.

No Comments

Leave A Comment