ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್....ಮುಂದುವರೆದ ನಕ್ಸಲ್ ಕೂಂಬಿಂಗ್: ಶರಣಾಗತಿಗೆ ಸೂಚನೆ, ಪ್ಯಾಕೇಜ್ ನೀಡುತ್ತೇವೆ ಎಂದ ಪರಮೇಶ್ವರ್
ಸಿಬಿಎಸ್ಇ 10ನೇ ತರಗತಿ ರಿಸಲ್ಟ್ ಪ್ರಕಟ – ಶೇ.93.12 ಫಲಿತಾಂಶ ದಾಖಲು
ನವದೆಹಲಿ:ಮೇ 12.ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) 10ನೇ ತರಗತಿಯ ಫಲಿತಾಂಶ ಪ್ರಕಟಿಸಿದ್ದು, ಈ ಬಾರಿ ಶೇಕಡಾ 93.12 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಫೆಬ್ರವರಿ 15ರಿಂದ ಮಾರ್ಚ್ 21 ರವರೆಗೆ ಸಿಬಿಎಸ್ಇಯ 10 ನೇ ಪರೀಕ್ಷೆಯು ನಡೆದಿದ್ದು, ಈಗಾಗಲೇ ಫಲಿತಾಂಶ ಪ್ರಕಟಗೊಂಡಿರುವ 12 ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಏಪ್ರಿಲ್ 5ರವರೆಗೆ ನಡೆದಿತ್ತು.
ಇನ್ನು 10ನೇ ತರಗತಿಯ ಸಿಬಿಎಸ್‌ಇ ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.
ಫಲಿತಾಂಶವನ್ನು ಅಧಿಕೃತ ವೆಬ್ ಸೈಟ್ ಗಳಾದ http://cbse.nic.in ಮತ್ತು http://cbse.gov.inನಲ್ಲಿ ಪೋಸ್ಟ್ ಮಾಡಲಾಗಿದ್ದು, ವಿದ್ಯಾರ್ಥಿಗಳು ವೀಕ್ಷಿಸಬಹುದು.