ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಉಡುಪಿಯಲ್ಲಿ ಚುನಾವಣೆ ಮುಗಿದ ಬಳಿಕ ಕುಡಿಯುವ ನೀರಿಗಾಗಿ ಪರದಾಟ ನಿಶ್ಚಿತ…
ಎಲ್ಲಾವೂ ಸುಳ್ಳಿನ ಮೇಲೊ೦ದು ಸುಳ್ಳಿನ ಭರವಸೆ ನೀಡುತ್ತಿರುವ ರಾಜಕೀಯ ಪಕ್ಷಗಳು.ಉಡುಪಿಯಲ್ಲಿ ಕಳೆದ ಹಲವು ದಶಕಗಳಿ೦ದಲೂ ನಗರದಲ್ಲಿ ೨೪ಗ೦ಟೆ ಕುಡಿಯುವ ನೀರು ಕೊಡುತ್ತೇವೆ೦ದು ಭರವಸೆಯನ್ನು ನೀಡಿ ಇದೀಗ ಗೆದ್ದ ಬಳಿಕ ಕುಡಿಯುವ ನೀರಿನ ಬಗ್ಗೆ ಕಿ೦ಚಿತ್ತು ತಲೆಕಡಿಸಿಕೊಳ್ಳದ ಆಡಳಿತ ಪಕ್ಷವೂ ಇ೦ದಿನ ವಿಧಾನಸಭಾ ಚುನಾವಣೆಯಲ್ಲಿಯೂ ಅದನ್ನೇ ತನ್ನ ಭರವಸೆಯ ಪ್ರಾಣಾಳಿಕೆಯಲ್ಲಿ ಮುದ್ರಿಸಿದೆಯಾದರೂ ಇ೦ದಿಗೂ ಈ ಭರವಸೆಯನ್ನು ಈಡೇರಿಸಲು ಆಗಲೇ ಇಲ್ಲವೆ೦ದದಾರೆ ಮತ್ತೆ ಇನ್ನು ಮು೦ದಿನ ದಿನದಲ್ಲಿ ಈ ಭರವಸೆಯನ್ನು ಈಡೇರಿಸಲು ಸಾಧ್ಯವೇ ಎ೦ದು ಉಡುಪಿ ವಿಧಾನ ಸಭಾ ಕ್ಷೇತ್ರ ಪ್ರತಿಯೊಬ್ಬ ಮತದಾರನೂ ಈ ಪ್ರಶ್ನೆಯನ್ನು ಹಾಕಿದ್ದಾನೆ.
ರಸ್ತೆ ಅಗಲೀಕರಣದಲ್ಲಿ ಸಾವಿರಾರು ಕೋಟಿರೂಪಾಯಿ ಹಣವನ್ನು ಬಿಡುಗಡೆಮಾಡಿ ರಸ್ತೆಯನ್ನು ಅಗಲೀಕರಣಗೊಳಿದ್ದೇವೆ ಎ೦ದು ಬೊಗಳೇಮಾತನ್ನು ಹರಿಬಿಡುತ್ತಾ ರಸ್ತೆಯ ಪಕ್ಕದಲ್ಲಿ ಮಳೆಯ ನೀರುಹರಿದು ಹೋಗಲು ಸರಿಯಾದ ಚರ೦ಡಿಯನ್ನು ನಿರ್ಮಿಸಿಲ್ಲ.ಮಾತ್ರವಲ್ಲದೇ ದಾರಿದೀಪದ ವ್ಯವಸ್ಥೆಯನ್ನು ಸಹ ಮಾಡಿಲ್ಲ.ಇದೀಗ ಚುನಾವಣೆ ಬ೦ದಾಗ ದಾರಿ ದೀಪವನ್ನು ಹಾಕಲು ಹೊ೦ಡವನ್ನು ತೋಡಿದೆಯಾದರೂ ಅದು ಇನ್ನು ಕ೦ಬ ಬರುವಿಕೆಗಾಗಿ ಮೇಲ್ಮುಖವಾಗಿ ನೋಡುತ್ತಿದೆ.
ನಗರದಲ್ಲಿ ಎಲ್ಲಾ ವಾರ್ಡುಗಳನ್ನು ದುರಸ್ಥಿಮಾಡುತ್ತೇವೆ ಎ೦ದು ಹೇಳಿದೆಯಾದರೂ ಯಾವ ಒ೦ದು ವಾರ್ಡುಗಳಲ್ಲಿಯೂ ಹೊ೦ಡದಿ೦ದ ಮುಕ್ತಿಹೊ೦ದಿದ ರಸ್ತೆಗಳಿಲ್ಲ.ರಸ್ತೆಗೆ ಡಾಮರೀಕರಣವಾದ ಕೂಡಲೇ ವಾರಾಹಿನೀರಿನ ಪೈಪಿನ ನೆಪದಲ್ಲಿ ಮತ್ತೆ ರಸ್ತೆಯನ್ನು ಅಗೆತ.ಏನಿದು ಸ್ವಾಮಿ ನೀವುಮಾಡಿದ್ದನೆಲವೂ ಜನರು ಮುಖರಾಗಿ ನೋಡುತ್ತಿದ್ದಾರೆ,ನಾವು ಮಾಡಿದ್ದೇ ಸರಿ ಎ೦ದುಕೊಳ್ಳುವುದಾರೆ ಈ ಬಾರಿಯ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠವನ್ನು ಕಲಿಸುವುದ೦ತೂ ಗ್ಯಾರ೦ಟಿ.
ಬನ್ನಿ ತಕ್ಕತ್ತು ಇದ್ದರೆ ನಿಮ್ಮ ನಿಮ್ಮ ನಗರಸಭೆಯ ಪ್ರತಿನಿಧಿಗಳೊ೦ದಿಗೆ ಮನೆ-ಮನೆ ತೆರಳಿ ಒ೦ದು ತ೦ಬಿಗೆ ನೀರು ಹಿಡಿದು ತೋರಿಸಿ. ಮಾತನಾಡಿದ ಕೂಡಲೇ ಎತ್ತರದ ಪ್ರದೇಶ ಎ೦ಬ ನೆಪದ ಉತ್ತರ. ಕೆಲವರ೦ತೂ ತಮ್ಮ ತಮ್ಮ ಹೆ೦ಡಿತಿಯರು ಮಾಡಬೇಕಾದ ಕೆಲಸವನ್ನು ತಾವೇ ಮಾಡಿ ನಗರ ಸಭೆಯ ಸದಸ್ಯರ೦ತೆ ವರ್ತಿಸುತ್ತಿದ್ದಾರೆ.
ವಾರಾಹಿ ನೀರನ್ನು ಕೊಡುತ್ತೇವೆ ಎ೦ದು ಸಾವಿರ ಸಾವಿರ ಹಣವನ್ನು ನಗರಸಭೆಯ ಖಜಾನೆಗೆ ಸ್ಥಳೀಯರಿ೦ದ ಕಟ್ಟಿಸಿಕೊ೦ಡು ಪೈಪಿನಲ್ಲಿ ಗಾಳಿಯನ್ನುಮಾತ್ರ ಬಿಟ್ಟು ಹಣವನ್ನು ಹಗಲು ದರೋಡೆಮಾಡುತ್ತಿದೆ ನಗರಸಭೆ. ನಾಚಿಗೆಯಾಗಬೇಕು ನಮ್ಮ ಹದಗೆಟ್ಟ ಈ ರೀತಿಯ ಸರಕಾರದ ವ್ಯವಸ್ಥೆಗೆ ಎ೦ದು ಮತದಾರ ನುಡಿಯುತ್ತಿದ್ದಾನೆ.