ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಕೇರಳ ಸ್ಟೋರಿ ಸಿನಿಮಾ ತಮ್ಮ ಮೇಲಿನ ದಾಳಿ ಎಂದು ಭಾವಿಸಿದರೆ ಅವರು ಭಯೋತ್ಪಾದಕರು: ಕಂಗನಾ ರಣಾವತ್

ಮುಂಬೈ: ವಿವಾದಿತ ಅಂಶಗಳನ್ನು ಹೊಂದಿರುವ ದಿ ಕೇರಳ ಸ್ಟೋರಿ ಚಿತ್ರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವಂತೆಯೇ ಇದೀಗ ಚಿತ್ರದ ಬೆನ್ನಿಗೆ ನಿಂತಿರುವ ಬಾಲಿವುಡ್ ನಟಿ ಕಂಗನಾ ರಣಾವತ, ಕೇರಳ ಸ್ಟೋರಿ ಸಿನಿಮಾ ತಮ್ಮ ಮೇಲಿನ ದಾಳಿ ಎಂದು ಭಾವಿಸಿದರೆ ಅವರು ಭಯೋತ್ಪಾದಕರು ಎಂದು ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾನು ಕೇರಳ ಸ್ಟೋರಿ ಸಿನಿಮಾ ಇನ್ನೂ ನೋಡಿಲ್ಲ. ಆದರೆ, ಇದನ್ನು ಬ್ಯಾನ್ ಮಾಡಲು ಕೆಲವರು ಬಹಳ ದೊಡ್ಡ ಷಡ್ಯಂತ್ರ ಹಾಗೂ ಪ್ರಯತ್ನ ನಡೆಸಿದ್ದಾರೆ. ಈ ಚಿತ್ರ ಐಸಿಸ್ ಸಂಘಟನೆ ಹೊರತುಪಡಿಸಿ ಇನ್ನಾರನ್ನೂ ಕೆಟ್ಟದಾಗಿ ಚಿತ್ರಿಸಿಲ್ಲ. ಬ್ಯಾನ್ ಮಾಡಬೇಕು ಎಂದವರಿಗೆ ಕೇರಳ ಹೈಕೋರ್ಟ್ ಕೂಡ ಈ ಚಿತ್ರವನ್ನು ಬ್ಯಾನ್ ಮಾಡೋಕೆ ಆಗಲ್ಲ ಎಂದು ಹೇಳಿದೆ. ಹಾಗಾಗಿ ದಿ ಕೇರಳ ಸ್ಟೋರಿ ಸಿನಿಮಾ ತಮ್ಮ ಮೇಲಿನ ದಾಳಿ ಎಂದು ಭಾವಿಸಿದರೇ ಅವರು ಭಯೋತ್ಪಾದಕರೇ ಸರಿ ಎಂದು ಹೇಳಿದ್ದಾರೆ.

ಸಿನಿಮಾದ ಈ ಕಥಾನಕ ಕೇರಳದಲ್ಲಿ ವಿವಾದವೆಬ್ಬಿಸಿದ್ದು ಆಡಳಿತಾರೂಢ ಸಿಪಿಐಎಂ ನೇತೃತ್ವದ ಸರ್ಕಾರ ಹಾಗೂ ಕಾಂಗ್ರೆಸ್ ನೇತೃತ್ವದ ವಿರೋಧ ‍ಪಕ್ಷಗಳು ಈ ಚಿತ್ರದ ವಿರುದ್ಧ ಮುಗಿಬಿದ್ದಿವೆ. ಇನ್ನೊಂದು ವಿಶೇಷವೆಂದರೆ ಕಳೆದ ಮೂರು ದಿನಗಳ ಹಿಂದೆ ಬಿಡುಗಡೆಯಾಗಿರುವ ದಿ ಕೇರಳ ಸ್ಟೋರಿ ಟ್ರೇಲರ್ 12 ಮಿಲಿಯನ್ ವೀಕ್ಷಣೆ ಕಂಡಿದೆ.

No Comments

Leave A Comment