ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ಉಪ್ಪಿನಂಗಡಿ: ಸ್ಕೂಟರ್‌ಗೆ ಕಾರು ಢಿಕ್ಕಿ – ಸವಾರ ಮೃತ್ಯು, ಮಕ್ಕಳಿಬ್ಬರಿಗೆ ಗಂಭೀರ ಗಾಯ
ಉಪ್ಪಿನಂಗಡಿ:ಏ, 22. ರಸ್ತೆ ಅಪಘಾತಕ್ಕೆ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಕಲ್ಲೇರಿಯಲ್ಲಿ ಇದೀಗ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಕಳಂಜಿಬೈಲ್ ನಿವಾಸಿ ಜಾಫರ್ (35) ಎಂದು ಗುರುತಿಸಲಾಗಿದೆ.
ಈದುಲ್ ಫಿತ್ರ್ ಸಂಭ್ರಮದಲ್ಲಿ ನೆಂಟರಸ್ಥರ ಮನೆಗೆ ತನ್ನ ಎರಡು ಮಕ್ಕಳ ಜತೆ ತೆರಳುತ್ತಿದ್ದ ಜಾಫರ್ ರವರ ಸ್ಕ್ಯೂಟರ್ ಗೆ ರಾಂಗ್ ಸೈಡ್ ನಲ್ಲಿ ಬಂದ ಕಾರೊಂದು ಢಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಜಾಫರ್ ರವರ ಸ್ಕ್ಯೂಟರ್ ಪೊದೆಗೆ ಹೋಗಿ ಬಿದ್ದಿದ್ದು ಜಾಫರ್ ರವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.