ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ಅಳಿವಿನಂಚಿನಲ್ಲಿರುವ 1 ಲಕ್ಷ ಕೋತಿಗಳಿಗೆ ಚೀನಾ ಬೇಡಿಕೆ: ರಫ್ತು ಮಾಡಲು ಶ್ರೀಲಂಕಾ ಸರ್ಕಾರ ಗ್ರೀನ್ ಸಿಗ್ನಲ್!

ಕೊಲಂಬೋ: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾ ಸರ್ಕಾರ ಇದೀಗ ತನ್ನ ಆರ್ಥಿಕ ಸಮಸ್ಯೆಗಳಿಂದ ಹೊರ ಬರಲು ಅಳಿವಿನಂಚಿನಲ್ಲಿರುವ ಕೋತಿ ಪ್ರಬೇಧವನ್ನು ಚೀನಾಗೆ ರಫ್ತು ಮಾಡಲು ಲಂಕಾ ಸರ್ಕಾರ ಮುಂದಾಗಿದೆ.

ಚೀನಾ ದೇಶವು 1 ಲಕ್ಷ ಕೋತಿಗಳ ಆಮದಿಗೆ ಬೇಡಿಕೆ ಇಟ್ಟಿದೆ ಎಂಬ ವಿಚಾರವನ್ನು ಶ್ರೀಲಂಕಾ ಸರ್ಕಾರ ದೃಢಪಡಿಸಿದೆ. ಅಷ್ಟೇ ಅಲ್ಲ, ಕೋತಿಗಳನ್ನು ರಫ್ತು ಮಾಡೋದಕ್ಕೂ ನಿರ್ಧರಿಸಿದೆ. ಚೀನಾ ದೇಶ ನೀಡಿರುವ ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾ ದೇಶಕ್ಕೆ ಡ್ರ್ಯಾಗನ್ ರಾಷ್ಟ್ರ ಹೇಳಿದಂತೆ ಕೇಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಪರಿಸರವಾದಿಗಳ ತೀವ್ರ ಹೋರಾಟದ ನಡುವಲ್ಲೂ ಚೀನಾದ ಬೇಡಿಕೆಗೆ ಶ್ರೀಲಂಕಾ ಅಸ್ತು ಎಂದಿದೆ.

ಶ್ರೀಲಂಕಾದಿಂದ ಅಳಿವಿನಂಚಿನಲ್ಲಿರುವ 1 ಲಕ್ಷ ಟೋಕೆ ಮಕಾಖ್‌ ಕೋತಿಗಳನ್ನು ಆಮದು ಮಾಡಲು ಚೀನಾದಿಂದ ವಿನಂತಿಯೊಂದು ಬಂದಿದೆ ಎಂಬುದನ್ನು ಶ್ರೀಲಂಕಾದ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿ ಗುಣದಾಸ ಸಮರಸಿಂಘೆ ದೃಢೀಕರಿಸಿದ್ದಾರೆ.  ಝೂಲಾಜಿಕಲ್‌ ಗಾರ್ಡನ್ಸ್‌ ಜೊತೆಗೆ ನಂಟು ಹೊಂದಿರುವ ಖಾಸಗಿ ಚೀನೀ ಕಂಪೆನಿ ಈ ವಿನಂತಿ ಸಲ್ಲಿಸಿದೆ ಎಂದು ಅವರು ಹೇಳಿದ್ದಾರೆ. ಅಂತೆಯೇ ಮೃಗಾಲಯ ಹಾಗೂ ಪ್ರಾಣಿಗಳ ತಳಿ ಸಂವರ್ಧನೆ ನಡೆಸುವ ಚೀನಾದ ಖಾಸಗಿ ಸಂಸ್ಥೆ ಇದಾಗಿದ್ದು, ಈ ಸಂಸ್ಥೆ ತನಗೆ ಕೋತಿಗಳು ಬೇಕೆಂದು ಬೇಡಿಕೆ ಇಟ್ಟಿದೆ. ಅವರು ಕೋರಿದ ಒಂದು ಲಕ್ಷ ಕೋತಿಗಳನ್ನು ಒಮ್ಮೆಗೆ ಕಳುಹಿಸಲಾಗುವುದಿಲ್ಲ, ಆದರೆ ದೇಶದಲ್ಲಿ ಕೋತಿಗಳು ಉಂಟುಮಾಡುತ್ತಿರುವ ಬೆಳೆ ನಷ್ಟವನ್ನು ಪರಿಗಣಿಸಲಾಗುವುದು. ಸಂರಕ್ಷಿತ ಪ್ರದೇಶಗಳ ಕೋತಿಗಳನ್ನು ಕಳುಹಿಸಲಾಗುವುದಿಲ್ಲ, ಕೃಷಿ ಪ್ರದೇಶಗಳಲ್ಲಿ ಬೆಳೆ ಹಾನಿಗೆ ಕಾರಣವಾಗಿರುವ ಕೋತಿಗಳನ್ನು ಕಳುಹಿಸುವ ಬಗ್ಗೆ ಯೋಚಿಸಲಾಗುವುದು,” ಎಂದು ಅವರು ಹೇಳಿದ್ದಾರೆ.

ರೀಲಂಕಾದಲ್ಲಿ ಮಾತ್ರ ಕಾಣ ಸಿಗುವ ಟೋಕ್ ಮಕಾಕ್‌ ಎಂಬ ತಳಿಯ ಕೋತಿಗಳು ಅಳಿವಿನ ಅಂಚಿನಲ್ಲಿವೆ. ಹೀಗಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ತಳಿಯ ಕೋತಿಗಳನ್ನು ಅಳವಿನ ಅಂಚಿನಲ್ಲಿ ಇರುವ ಜೀವಿಗಳ ಪಟ್ಟಿಯಲ್ಲಿ ಕೆಂಪು ವರ್ಗದಲ್ಲಿ ಇರಿಸಲಾಗಿದೆ. ಈ ನಿರ್ದಿಷ್ಟ ಜಾತಿಯ ಕೋತಿಗಳು ಶ್ರೀಲಂಕಾದಲ್ಲಿ ಮಾತ್ರ ಇದ್ದು ಇಂಟರ್‌ನ್ಯಾಷನಲ್‌ ಯೂನಿಯನ್‌ ಫಾರ್‌ ಕನ್ಸರ್ವೇಶನ್‌ ಆಫ್‌ ನೇಚರ್‌ ಕೆಂಪು ಪಟ್ಟಿಯಲ್ಲಿ ಈ ಜಾತಿಯ ಕೋತಿಗಳಿವೆ. ಚೀನಾದ ಮೃಗಾಲಯದಲ್ಲಿ ಪ್ರದರ್ಶಿಸಲು ಕೋತಿಗಳನ್ನು ಕಳುಹಿಸಿಕೊಡಲು ಬಂದಿರುವ  ಬೇಡಿಕೆಯ ಕುರಿತು ಕಳೆದ ವಾರ  ಶ್ರೀಲಂಕಾದ ಕೃಷಿ ಸಚಿವ ಮಹಿಂದ ಅಮರವೀರ ಕೂಡ ಹೇಳಿದ್ದರು.

ಅಲ್ಲಿನ 1000ಕ್ಕೂ ಅಧಿಕ ಮೃಗಾಲಯಗಳಿಗಾಗಿ ಈ ಬೇಡಿಕೆ ಬಂದಿದೆ ಎಂದು ಅವರು ಹೇಳಿದ್ದಾರೆ. ಶ್ರೀಲಂಕಾದ ಕಾನೂನುಗಳು ಜೀವಂತ ಪ್ರಾಣಿಗಳ ರಫ್ತಿಗೆ ನಿಷೇಧ ಹೇರಿವೆ. ಈ ವರ್ಷ ಶ್ರೀಲಂಕಾದಲ್ಲಿರುವ ಮೂರು ಜಾತಿಯ ಕೋತಿಗಳು, ನವಿಲುಗಳು,  ಕಾಡು ಹಂದಿಗಳನ್ನು ತನ್ನ ಸಂರಕ್ಷಿತ ಪಟ್ಟಿಯಿಂದ ತೆಗೆದುಹಾಕಿದ್ದು ಕೃಷಿನಾಶಗೈಯ್ಯುವವುಗಳನ್ನು ಕೊಲ್ಲಲು ಅನುಮತಿಸಿದೆ. ಚೀನಾ ಬೇಡಿಕೆಯಿರಿಸಿರುವ ಜಾತಿಯ ಕೋತಿಗಳು ಶ್ರೀಲಂಕಾದಲ್ಲಿ ಹಲವೆಡೆ ಬೆಳೆಹಾನಿ ನಡೆಸುತ್ತಿದ್ದು ಜನರ ಮೇಲೂ ದಾಳಿ ನಡೆಸುತ್ತವೆ.

ಚೀನಾ ದೇಶವು ತನಗೆ ಟೋಕ್ ಮಕಾಕ್ ತಳಿಯ ಕೋತಿಗಳೇ ಬೇಕು ಎಂದು ಕೇಳುತ್ತಿಲ್ಲ. ಆದರೆ, ಯಾವುದೇ ತಳಿಯ ಕೋತಿಗಳನ್ನಾದರೂ ರಫ್ತು ಮಾಡಿ ಎಂದು ಬೇಡಿಕೆ ಇಟ್ಟಿದೆ. ಒಟ್ಟು 1 ಲಕ್ಷ ಕೋತಿಗಳನ್ನು ಚೀನಾದ 1 ಸಾವಿರ ಪ್ರಾಣಿ ಸಂಗ್ರಹಾಲಯಗಳಲ್ಲಿ ಇರಿಸಲು, ಪ್ರದರ್ಶನ ಮಾಡಲು ನಿರ್ಧರಿಸಿರೋದಾಗಿ ಚೀನಾ ಹೇಳಿದೆ. ಆದ್ರೆ, ಈ ಕೋತಿಗಳನ್ನು ಆಹಾರವನ್ನಾಗಿ ಸೇವಿಸುವ ಉದ್ದೇಶದಿಂದ ಅಥವಾ ಪ್ರಯೋಗಾಲಯಗಳಲ್ಲಿ ಬಳಕೆ ಮಾಡಲು ಅಗತ್ಯವಿದೆ ಎಂದು ಚೀನಾ ಹೇಳಿಲ್ಲ.

ಚೀನಾದ ಖಾಸಗಿ ಕಂಪೆನಿಗೆ ʻಪ್ರಾಯೋಗಿಕ ಉದ್ಧೇಶಗಳಿಗೆʼ ಕೋತಿಗಳ ಬೇಡಿಕೆ ಇರಿಸಿರುವ ಬಗ್ಗೆ ತನಗೆ ತಿಳಿದಿಲ್ಲ ಎಂದು ಕೊಲಂಬೋದಲ್ಲಿರುವ ಚೀನಾ ದೂತಾವಾಸ ಹೇಳಿದೆ.

No Comments

Leave A Comment