ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಯುಕೆ ಉಪ ಪ್ರಧಾನಿ ಡೊಮಿನಿಕ್ ರಾಬ್ ರಾಜೀನಾಮೆ

ಲಂಡನ್:  ಯುಕೆ ಉಪ ಪ್ರಧಾನಿ ಡೊಮಿನಿಕ್ ರಾಬ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ವಿರುದ್ಧದ ಬೆದರಿಕೆ ಆರೋಪ ತನಿಖೆ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ. ತನಿಖೆಯ ಫಲಿತಾಂಶ ಸ್ವೀಕರಿಸಲು ಕರ್ತವ್ಯ ಬದ್ಧನಾಗಿರುವುದಾಗಿ ಭಾವಿಸಿರುವುದಾಗಿ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

 ನನ್ನ ವಿರುದ್ಧದ ಎರಡು ಆರೋಪಗಳನ್ನು ಹೊರತುಪಡಿಸಿ ಉಳಿದೆಲ್ಲಾ ಆರೋಪಗಳನ್ನು  ವರದಿ ವಜಾಗೊಳಿಸಿದೆ. ಈ  ಎರಡು ಆರೋಪಗಳು ದೋಷಪೂರಿತವಾಗಿವೆ ಮತ್ತು ಉತ್ತಮ ಸರ್ಕಾರದ ನಡವಳಿಕೆಗೆ ಅಪಾಯಕಾರಿ ನಿದರ್ಶನವಾಗಿದೆ ಎಂದು ಭಾವಿಸುವುದಾಗಿ ಅವರು ಹೇಳಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಉಪ ಪ್ರಧಾನ ಮಂತ್ರಿಯಾಗಿ ಡೊಮಿನಿಕ್ ರಾಬ್ ಅವರನ್ನು ಪ್ರಧಾನಿ ರಿಷಿ ಸುನಕ್ ನೇಮಕ ಮಾಡಿದ್ದರು.

No Comments

Leave A Comment