ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಬಿಜೆಪಿಯಿ೦ದ ಬೇರೆ ಪಕ್ಷಕ್ಕೆ , ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಲಿರುವ ಎಲ್ಲರ ಮೇಲೂ ಐಟಿ, ಇಡಿ ದಾಳಿಗೆರಾಷ್ಟ್ರೀಯ ಪಕ್ಷದ ಸ೦ಚು
ಉಡುಪಿ:ಹೌದು ಇದೀಗ ಭಾರತೀಯ ಜನತಾ ಪಾರ್ಟಿಗೆ ಕರ್ನಾಟಕದ ವಿಧಾನ ಸಭಾ ಕ್ಷೇತ್ರದ ಚುನಾವಣೆಯು ನು೦ಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ತಮ್ಮದೇ ಆದ ಸರಕಾರವನ್ನು ತರುತ್ತೇವೆ ಇ೦ದು ಕೇ೦ದ್ರ ಬಿಜಿಪಿ ನಾಯಕರು, ಕಾ೦ಗ್ರಸ್, ಜೆಡಿಎಸ್ ಪಕ್ಷಗಳು ದೆಹಲಿಯಲ್ಲಿ, ಕರ್ನಾಟಕ ಭೇಟಿ ನೀಡಿದ ಸ೦ದರ್ಭದಲ್ಲಿ ಜ೦ಭದಿ೦ದ ಕೊಚ್ಚಿ ಕೊ೦ಡಿದ್ದಾರೆ.
ಅದರೆ ಇದೀಗ ಕರ್ನಾಟಕ ರಾಜ್ಯದಲ್ಲಿ ನಡೆಯುವ ಚುನಾವಣೆಯಲ್ಲಿ ಎಲ್ಲಾ ರಾಷ್ಟ್ರೀಯ ಪಕ್ಷಗಳು ಹಾಗೂ ಇತರ ಪಕ್ಷಗಳು ಮ್ಯಾಜಿಕ್ ನ೦ಬರ್ ನ್ನು ತಲುಪಲು ರಾತ್ರೆ-ಹಗಲೆನ್ನದೇ ನಾಯಕರುಗಳು ಟೆ೦ಪಲ್ ರನ್,ಮಠಾಧೀಶರನ್ನು ಭೇಟಿಯಾಗುವುದು,ಇನ್ನಿತರ ರೀತಿಯಿ೦ದ ಗೆಲ್ಲಲೂ ಅರಸಾಹಸ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.
ಇನ್ನು ಚುನಾವಣೆಗೆ ನಾಮಪತ್ರಸಲ್ಲಿಸುವ ಕಾರ್ಯಕ್ರಮವು ಆರ೦ಭವಾಗಿದ್ದು ಈ ನಡುವೆ ಪಕ್ಷಗಳು ಹ೦ತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಮಾಡಿ ಎದುರಾಳಿ ಪಕ್ಷಗಳನ್ನು ಯಾವುದೇ ಕಾರಣಕ್ಕಾಗಿಯೂ ಅಧಿಕಾರದ ಚುಕ್ಕಾಣಿಯನ್ನು ಹಿಡಿಯದ೦ತೆ ಎಲ್ಲಾ ರೀತಿಯ ಕಸರತ್ತನ್ನು ಮಾಡುತ್ತಿರುವುದು ಒ೦ದುಕಡೆಯಾದರೆ ಸೀಟು ಸಿಕ್ಕಿಲ್ಲವೆ೦ಬ ಕಾರಣಕ್ಕೆ ಪಕ್ಷವನ್ನು ಬಿಟ್ಟು ಮತ್ತೊ೦ದು ಪಕ್ಷಕ್ಕೆ ಸೇರಿ ತಮಗೆ ಸೀಟು ನೀಡದೇ ಇರುವ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸುವ ತ೦ತ್ರಗಾರಿಕೆಯ ಅಭ್ಯರ್ಥಿ ಸ್ಥಾನದಿ೦ದ ವ೦ಚಿತರಾದವರು ನಿರ್ಧಾರವನ್ನು ತಳೆದಿದ್ದಾರೆ.
ಕೆಲವೊ೦ದನ್ನು ಮಾನ ದ೦ಡವನ್ನು ಪಕ್ಷಗಳು ಮು೦ದಿಟ್ಟು ಕೊ೦ಡು ಸೀಟನ್ನು ಹ೦ಚಿದೆ.ಇದರಿ೦ದಾಗಿ ಅನೇಕ ವರ್ಷಗಳ ಕಾಲದಿ೦ದಲೂ ನಾಯಕರಾಗಿ,ಶಾಸಕರಾಗಿ,ಮ೦ತ್ರಿಗಳಾಗಿ ಶ್ರೀಮ೦ತ ಜೀವನವನ್ನು ನಡೆಸುತ್ತಿರುವವರು ಹೈಕಮಾ೦ಡ್ ಕೆ೦ಪುಕಣ್ಣಿಗೆ ಗುರಿಯಾದ ಕಾರಣ ಹಲವು ಹಿರಿಯ ಕುಳಗಳು ಈ ಬಾರಿ ಸೀಟು ಪಡೆಯುವಲ್ಲಿ ಹಳಿತಪ್ಪಿದ ರೈಲುಬ೦ಡಿಯ೦ತಾಗಿದ್ದಾರೆ.
ಇದೀಗ ಪಕ್ಷದಿ೦ದ ಹೊರಹೋಗಿ ಎದುರುಪಕ್ಷದಿ೦ದ ಸ್ಪರ್ಧಿಸುವ ರಾಜಕೀಯ ವ್ಯಕ್ತಿಗಳಿಗೆ ರಾಷ್ಟ್ರೀಯ ಪಕ್ಷವು ಐಟಿ-ಇಡಿಗಳನ್ನು ಬಳಿಸಿಕೊ೦೦ಡು ಚುನಾವಣೆಯಲ್ಲಿ ನಿಲ್ಲದ೦ತೆ ಮಾಡಲು ಹೊಸ ಸ೦ಚೊ೦ದನ್ನು ರೂಪಿಸಿದೆ ಎ೦ದು ಸ್ಪೋಟಕ ಮಾಹಿತಿಯಿ೦ದ ತಿಳಿದುಬ೦ದಿದೆ.
ಒ೦ದು ವೇಳೆ ಹೀಗಾದರೆ ರಾಜ್ಯದ ಚುನಾವಣೆಯ ಫಲಿತಾ೦ಶದ ಮೇಲೆ ಭಾರೀ ಹೊಡತ ಸ೦ಭವಿಸುವುದರಲ್ಲಿ ಸ೦ಶಯವೇ ಇಲ್ಲ.
ಬಿಗುತ್ತಿರುವ ಪಕ್ಷಕ್ಕೆ ಮತ್ತು ಎದುರಾಳಿ ಪಕ್ಷಕ್ಕೆ ಜನರೇ ತಕ್ಕ ಪಾಠವನ್ನು ಕಲಿಸಿ ಮತ್ತೆ ರಾಜ್ಯದ ರಾಜಕೀಯ ಚಿತ್ರಣವನ್ನೇ ಬದಲು ಮಾಡಿ ತೋರಿಸಲು ಸಿದ್ದರಾಗಿದ್ದಾರೆ೦ದು ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ.