
ಉತ್ತರ ಪ್ರದೇಶ: ನಾಪತ್ತೆಯಾಗಿದ್ದ ಎರಡು ವರ್ಷದ ಬಾಲಕಿ ನೆರೆಮನೆಯ ಬ್ಯಾಗಿನಲ್ಲಿ ಶವವಾಗಿ ಪತ್ತೆ
ನೋಯ್ಡಾ: ನಾಪತ್ತೆಯಾಗಿದ್ದ ಎರಡು ವರ್ಷದ ಬಾಲಕಿಯ ಶವವು ಗ್ರೇಟರ್ ನೋಯ್ಡಾದ ನೆರೆಮನೆಯ ಬ್ಯಾಗಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಮಗುವನ್ನು ಕೊಚ್ಚಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸಂತ್ರಸ್ತೆಯ ಕುಟುಂಬವು ಬಾಡಿಗೆದಾರರಾಗಿ ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು ಎಂದು ಅವರು ಹೇಳಿದರು.
ಪೊಲೀಸರ ಪ್ರಕಾರ, ಏಪ್ರಿಲ್ 7 ರಂದು ಸೂರಜ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವ್ಲಾ ಗ್ರಾಮದ ಬಾಡಿಗೆ ಮನೆಯಿಂದ ಬಾಲಕಿ ನಾಪತ್ತೆಯಾಗಿದ್ದು, ಅದಾದ ಎರಡು ದಿನಗಳ ನಂತರ ಶವ ಪತ್ತೆಯಾಗಿದೆ.
ಏಪ್ರಿಲ್ 8 ರಂದು ಬಾಲಕಿಯ ತಂದೆ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು ಮತ್ತು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಅವರ ಪತ್ನಿ ಕೂಡ ಮಾರುಕಟ್ಟೆಗೆ ತೆರಳಿದ್ದರು. ಅಲ್ಲಿಂದ ಮನೆಗೆ ಹಿಂತಿರುಗಿದಾಗ ಅವರ ಎರಡು ವರ್ಷದ ಮಗಳು ಕಾಣೆಯಾಗಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾರೆ.