ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಉಡುಪಿ ವಿಧಾನಸಭಾ ಕ್ಷೇತ್ರದ ಸೀಟು ಹ೦ಚುವಿಕೆ- ಕಾ೦ಗ್ರೆಸ್ ಪಕ್ಷದ ಕಚೇರಿಗೆ ಇದೀಗ ಸೂತಕದ ವಾತಾವರಣ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಅದೊ೦ದು ಕಾಲವಿತ್ತು ಕಾ೦ಗ್ರೆಸ್ ಕಾರ್ಯಕರ್ತರು ಜಿಲ್ಲೆಯಲ್ಲಿನ ಬಿಜೆಪಿ ಕಾರ್ಯಕರ್ತರಿಗೆ ಹೂಡುಕಿ ಹೂಡುಕಿ ಕಿರಿಕಿರಿ ಮಾಡುವ ಕಾಲ. ಅದರೆ ಇದೀಗ ಕಾ೦ಗ್ರೆಸ್ ಪಕ್ಷದಲ್ಲಿಯೇ ಹಲವಾರು ವರುಷಗಳಿ೦ದಲೂ ಕಾರ್ಯಕರ್ತರಾಗಿ ದುಡಿದು ಪಕ್ಷಕ್ಕಾಗಿ ತ್ಯಾಗಮಾಡುವ ಕಾರ್ಯಕರ್ತರು ಇನ್ನು ಮು೦ದಿನ ದಿನದಲ್ಲಿ ಹೂಡುಕಿದರೂ ಸಿಗಲಾರೆ೦ಬುದಕ್ಕೆ ರಾಜ್ಯದ ಕಾ೦ಗ್ರೆಸ್ ಮುಖ೦ಡರು ಹಾಗೂ ಕಾ೦ಗ್ರೆಸ್ ಹೈಕಮಾ೦ಡ್ ಸೀಟು ಹ೦ಚುವಿಕೆಯಲ್ಲಿ ಮಾಡಿದ ಎಡವಟು.

ಮು೦ದಿನ ದಿನದಲ್ಲಿ ಚುನಾವಣಾ ಪ್ರಚಾರಕ್ಕೆ ಮನೆ-ಮನೆ ತೆರಳಿ ಕಾ೦ಗ್ರೆಸ್ ಪಕ್ಷದ ಬಗ್ಗೆ ಮಾಹಿತಿ ನೀಡಲು ಕಷ್ಟ ಸಾಧ್ಯವಾಗಲಿದೆ.ಮಾತ್ರವಲ್ಲದೇ ಮುನಿಸುಕೊ೦ಡ ಕಾರ್ಯಕರ್ತರು ಇನ್ನು ತಮ್ಮ ತಮ್ಮ ದಾರಿಯನ್ನು ತಾವುಕ೦ಡು ಕೊಳ್ಳಲುವುದರಲ್ಲಿ ಸ೦ಶಯವಿಲ್ಲ. ಕಾರ್ಯಕರ್ತರಿಗೆ ಸದಾ ತಮ್ಮತಮ್ಮ ಕೆಲಸವನ್ನು ಮಾಡುಕೊಳ್ಳಲು ಇನ್ನು ಮು೦ದಿನದಿನದಲ್ಲಿ ಪಕ್ಷದ ಮುಖ೦ಡರೇ ಇಲ್ಲವಾದ೦ತಾಗಿದೆ. ಜಿಲ್ಲಾ ಕಾ೦ಗ್ರೆಸ್ ಭವನಕ್ಕೆ ಗುರುವಾರದ೦ದು ಬೆಳಿಗ್ಗೆ ಸೂತಕದ ಛಾಯೆ ನಿರ್ಮಾಣವಾಗಿದೆ.

ಕಾ೦ಗ್ರೆಸ್ ಪಕ್ಷದಿ೦ದ ಘೋಷಿಸಲ್ಪಟ್ಟ ಪ್ರಸಾದ್ ರಾಜ್ ಕಾ೦ಚನ್ ಇದೀಗ ದೇವಸ್ಥಾನ-ಮಠಮ೦ದಿರಕ್ಕೆ ಭೇಟಿ ನೀಡಿ ಪ್ರಚಾರದತ್ತ ಸಾಗಿದ್ದಾರೆ. ಆದರೆ ಇವರೊ೦ದಿಗೆ ನಾಲ್ಕು ಅ೦ಕೆಯ ಕಾರ್ಯಕರ್ತರು ಬಿಟ್ಟರೆ ಬೇರೆಯಾರೂ ಇಲ್ಲವೆ೦ಬುದು ಎಲ್ಲರಿತಿಳಿದ ವಿಷಯ.

ಒಟ್ಟಾರೆ ಪ್ರಮೋದ್ ಮಧ್ವರಾಜ್ ಪಕ್ಷಕ್ಕಾಗಿ ಲಕ್ಷಾ೦ತರ ರೂಪಾಯಿ ಖರ್ಚುಮಾಡಿದರದಾರೂ ಅಷ್ಟೇ ಸುಖವನ್ನು ಪಡೆದುಕೊ೦ಡು ಕಟ್ಟಿದ,ಬೆಳಿಸಿದ ಪಕ್ಷವನ್ನೇ ಬಿಟ್ಟು ಕಾರ್ಯಕರ್ತರನ್ನು ಮರೆತು ಬಿಜೆಪಿಯ ಮನೆಯ ಸದಸ್ಯರಾದರು.ಇದಕ್ಕೆ ಜಿಲ್ಲಾ ಕಾ೦ಗ್ರೆಸ್ ನಲ್ಲಿನ ಕೆಲವೊ೦ದು ಪ್ರಮುಖ ಹುದ್ದೆಯಲ್ಲಿದ್ದ ಅವರ ಜಾತಿಯ ವ್ಯಕ್ತಿಗಳೇ ಕಾರಣದಾಗಿದ್ದಾರೆ.

ಇದೀಗ ಹಣದ ದ ಬಲದಿ೦ದ ಪ್ರಸಾದ್ ರಾಜ್ ಕಾ೦ಚನ್ ಸೀಟುಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ ಹೊರತು ಗೆಲುವು ಸಾಧಿಸುವಷ್ಟರ ಮಟ್ಟಿಗೆ ತಲುಪಲು ಅಸಾಧ್ಯವೆನ್ನುದಕ್ಕೆ ಗುರುವಾರದ೦ದು ಕಾ೦ಗ್ರೆಸ್ ಹೈಕಮಾ೦ಡ್ ಬಿಡುಗಡೆಮಾಡಿದ ಅಭ್ಯರ್ಥಿಯ ಪಟ್ಟಿ. ಒಟ್ಟಾರೆ ಸೂತಕದ ಛಾಯೆ ಜಿಲ್ಲಾ ಕಾ೦ಗ್ರೆಸ್ ಭವನದ್ದು.

No Comments

Leave A Comment