ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಚುನಾವಣೆಯಲ್ಲಿ ಸ್ಪರ್ಧೆಯ ಆಸೆಯಿಲ್ಲ – ಕೆ.ಜಯಪ್ರಕಾಶ್ ಹೆಗ್ಡೆ
ಉಡುಪಿ: ನಾನು ನನ್ನ ಜೀವನದಲ್ಲಿ ಮಾಡಬೇಕಾದಷ್ಟು ಸಮಾಜ ಸೇವೆಯನ್ನು ಮಾಡಿರುವ ತೃಪ್ತಿ ನನಗಿದೆ. ಬ್ರಹ್ಮಾವರ ವಿಧಾನ ಸಭಾ ಕ್ಷೇತ್ರದಿ೦ದ ಜನತಾದಳದಿ೦ದ ಸ್ಪರ್ಧಿಸಿ ತದನ೦ತರ ದಿನಗಳಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಜನರ ಸಹಕಾರದಿ೦ದ ಗೆದ್ದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಅದು ನನಗೆ ತೃಪ್ತಿಯುಕೊಟ್ಟಿದೆ. ತದನ೦ತರ ನಾನು ಕಾ೦ಗ್ರೆಸ್ ಪಕ್ಷಕ್ಕೆ ಸೇರಿದೆ ಅಲ್ಲಿ ನನಗೆ ಸ೦ಸದ ಸ್ಥಾನಕ್ಕಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಾ೦ಗ್ರೆಸ್ ಪಕ್ಷವು ನೀಡಿತು.
ರಾಜ್ಯ ಸರಕಾರದಲ್ಲಿ ಸಚಿವನಾಗಿ ಉಡುಪಿ ಜಿಲ್ಲೆಯ ಅಭಿವೃದ್ಧಿಗಾಗಿ ಅಪಾರವಾಗಿ ಶ್ರಮಿಸಿದ್ದೇನೆ. ಉಡುಪಿ ಜಿಲ್ಲೆಯನ್ನಾಗಿ ಘೋಷಣೆ ಮಾಡಿಸಿದ ತೃಪ್ತಿ ನನಗಿದೆ ಮಾತ್ರವಲ್ಲದೇ ಜಿಲ್ಲೆಯ ಎಲ್ಲಾ ವರ್ಗದ ಜನರು ನನಗೆ ಸಹಕಾರವನ್ನು ನೀಡಿದ್ದಾರೆ.ಮತ್ತೊಮ್ಮೆ ಚುನಾವಣೆಗೆ ಸ್ಪರ್ಧೆಗೆ ನನಗೆ ಉತ್ಸಾಹವಿಲ್ಲವೆ೦ದು ಅವರು ತಿಳಿಸಿದ್ದಾರೆ.
ರಾಜ್ಯದ ಬಿಜೆಪಿಯು ನನಗೆ ರಾಜ್ಯದ ಹಿ೦ದುಳಿದ ವರ್ಗಗಳ ಆಯೋಗದ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಿದೆ. ಅದನ್ನು ಉತ್ತಮ ರೀತಿಯಲ್ಲಿ ನಡೆಸಿಕೊ೦ಡು ಹೋಗಬೇಕಾದ ಕೆಲಸ ನನ್ನದು ಎ೦ದು ಅವರು ಕರಾವಳಿಕಿರಣ ಡಾಟ್ ಕಾ೦ನೊ೦ದಿಗೆ ಮಾತನಾಡುತ್ತಾ ತಮ್ಮ ಅಭಿಪ್ರಾಯವನ್ನು ಹ೦ಚಿಕೊ೦ಡಿದ್ದಾರೆ.