ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಲಿದೆ. ಮತ್ತು 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ....

‘ನನ್ನ ಹೆಂಡತಿ ರಾಜಕೀಯಕ್ಕೆ ಬಂದಿದ್ದು ಪಕ್ಷ ಉಳಿಸಲಿಕ್ಕೆ’ – ಹೆಚ್. ಡಿ ಕುಮಾರಸ್ವಾಮಿ

ಬೆಂಗಳೂರು: ಏ 04. ಅನಿತಾ ಕುಮಾರಸ್ವಾಮಿ ಅವರು ರಾಜಕೀಯಕ್ಕೆ ಬಂದಿದ್ದು ಪಕ್ಷ ಉಳಿಸಲಿಕ್ಕೆ. ಪಕ್ಷದ ಅಭ್ಯರ್ಥಿ ಇಲ್ಲದಿದ್ದಾಗ ಪಕ್ಷದ ಗೌರವ ಉಳಿಸಲು ಅವರನ್ನು ಕರೆದುಕೊಂಡು ಬಂದು ನಿಲ್ಲಿಸಿದೆವು, ನಾವೇ ಅವರನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಂಡಿದ್ದೇವೆ ಹೊರತು ಅವರಿಗೆ ಸ್ವಂತ ಆಸಕ್ತಿಯಿರಲಿಲ್ಲ ಎಂದು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಭವಾನಿಗೆ ಟಿಕೆಟ್ ಕೊಡುವುದಾದರೆ ನನಗೆ ಕೂಡ ನೀಡಬೇಕೆಂದು ಅನಿತಾ ಕುಮಾರಸ್ವಾಮಿ ಪಟ್ಟು ಹಿಡಿದಿದ್ದಾರೆ ಎಂದು ವರದಿಗಳು ಬರುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಎಚ್‌‌ಡಿಕೆ, ನಮ್ಮ ಕುಟುಂಬದಲ್ಲಿ ಅನಿತಾ ಕುಮಾರಸ್ವಾಮಿಯವರನ್ನು ಎರಡು ಮೂರು ಬಾರಿ ಪಕ್ಷದ ಅಭ್ಯರ್ಥಿ ಇಲ್ಲದೇ ಇದ್ದಾಗ ನಿಲ್ಲಿಸಲಾಗಿತ್ತಷ್ಟೆ ಹೊರತು ಅವರಿಗೆ ಆಸಕ್ತಿಯಿರಲಿಲ್ಲ. ಕಾರ್ಯಕರ್ತರು ಮತ್ತು ದೇವೇಗೌಡರ ಸೂಚನೆ ಒತ್ತಡ ಮೇರೆಗೆ ಅನಿತಾ ಚುನಾವಣೆಗೆ ನಿಂತು ಗೆದ್ದರು. ಇನ್ನು ಮುಂದೆ ಅಭ್ಯರ್ಥಿಯಾಗಲು ಅವರಿಗೆ ಒಲವು ಇಲ್ಲ. ಚುನಾವಣಾ ರಾಜಕೀಯದಿಂದ ದೂರವುಳಿದಿದ್ದಾರೆ ಎಂದರು.

ಇನ್ನು ಹಾಸನ ಜಿಲ್ಲೆ ರಾಜಕಾರಣ ಬೇರೆ, ನನ್ನ ಹೆಂಡತಿ ರಾಜಕಾರಣ ಬೇರೆ, ಸೊಸೆಯಂದಿರ ಮಧ್ಯೆ ಹೊಡೆದಾಟ ಇಲ್ಲ, ನನ್ನ ಹೆಂಡತಿ ರಾಜಕೀಯಕ್ಕೆ ಬಂದಿದ್ದು ಪಕ್ಷ ಉಳಿಸಲಿಕ್ಕೆ. ಹಾಗಾಗಿ ಆ ಕೆಟಗರಿಕೆ ಇಲ್ಲಿಯದನ್ನು ಸೇರಿಸಬೇಕಾಗಿಲ್ಲ. ನನ್ನ ಕುಟುಂಬವನ್ನು ಅನಿತಾ ಕುಮಾರಸ್ವಾಮಿಯನ್ನು ಮಧ್ಯೆ ತರಬೇಡಿ, ಅವರು ಗೌರವಯುತವಾಗಿ ಕುಟುಂಬದ ಮರ್ಯಾದೆ ಉಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

No Comments

Leave A Comment