ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ಕಾಸರಗೋಡು: ಬೈಕ್ ಮತ್ತು ಟ್ಯಾಂಕರ್ ಲಾರಿ ನಡುವೆ ಅಪಘಾತ – ಇಬ್ಬರು ಮೃತ್ಯು

ಕಾಸರಗೋಡು:ಮಾ 31. ಬೈಕ್ ಮತ್ತು ಟ್ಯಾಂಕರ್ ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಮೃತಪಟ್ಟ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿ ಚೆರ್ವತ್ತೂರು ಕೊವ್ವಲ್‌‌ನಲ್ಲಿ ನಡೆದಿದೆ.

ನೀಲೇಶ್ವರ ಚಾಯೋತ್ ನ ದೀಪಕ್ (33) ಮತ್ತು ಕನ್ನಾಟಿಪಾರೆಯ ಶೋಭಿತ್ (27) ಮೃತ ಪಟ್ಟವರು.

ದೀಪಕ್ ಖಾಸಗಿ ಬಸ್ಸಿನ ಚಾಲಕರಾಗಿದ್ದರು. ಶೋಭಿತ್ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಸ್ನೇಹಿತರಾಗಿದ್ದ ಇವರು ರಾತ್ರಿ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ.

ಇನ್ನು ಮೃತ ದೇಹಗಳನ್ನು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಿದೆ.

No Comments

Leave A Comment