ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಮಾಜಿ ಪತ್ನಿ, ಸಹೋದರನ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ ನವಾಜುದ್ದೀನ್ ಸಿದ್ದಿಕಿ

ಮುಂಬೈ: ತಮ್ಮ ವಿರುದ್ಧ ಮಾನಹಾನಿಕರ ಮತ್ತು ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರು ತಮ್ಮ ಮಾಜಿ ಪತ್ನಿ ಆಲಿಯಾ ಅಲಿಯಾಸ್ ಜೈನಾಬ್ ಸಿದ್ದಿಕಿ ಮತ್ತು ಅವರ ಸಹೋದರ ಶಾಮಸ್ ನವಾಬ್ ಸಿದ್ದಿಕಿ ವಿರುದ್ಧ 100 ಕೋಟಿ ರೂ. ನಷ್ಟ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಮೊಕದ್ದಮೆಯನ್ನು ಮಾರ್ಚ್ 30 ರಂದು ನ್ಯಾಯಮೂರ್ತಿ ರಿಯಾಜ್ ಚಾಗ್ಲಾ ಅವರ ಏಕ ಸದಸ್ಯ ಪೀಠವು ವಿಚಾರಣೆ ಮಾಡುವ ಸಾಧ್ಯತೆಯಿದೆ.

ತಮ್ಮ ಮಾಜಿ ಪತ್ನಿ ಆಲಿಯಾ ಮತ್ತು ತನ್ನ ಸಹೋದರ ಶಾಮಸ್ ನವಾಬ್ ಸಿದ್ದಿಕಿ ಮಾನಹಾನಿ ಮಾಡುವ ಯಾವುದೇ ಹೇಳಿಕೆಗಳು ಅಥವಾ ಟೀಕೆಗಳನ್ನು ಮಾಡದಂತೆ ಶಾಶ್ವತವಾಗಿ ನಿರ್ಬಂಧಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅಲ್ಲದೆ, ತಮ್ಮ ಮಾಜಿ ಪತ್ನಿ ಮತ್ತು ಸೋದರನಿಂದ ಲಿಖಿತ ಕ್ಷಮೆಯಾಚನೆಯನ್ನು ಕೋರಿದ್ದಾರೆ.

ಮೊಕದ್ದಮೆಯ ಪ್ರಕಾರ, ನವಾಜುದ್ದೀನ್ 2008 ರಲ್ಲಿ ಶಾಮಸ್ ನವಾಬ್ ಸಿದ್ದಿಕಿ ಅವರನ್ನು ತನ್ನ ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದರು ಮತ್ತು ಅವರನ್ನು ನಂಬಿ ಎಲ್ಲಾ ಹಣಕಾಸಿನ ಕೆಲಸಗಳನ್ನು ನಿಯೋಜಿಸಿದ್ದರು. ಆದರೆ, ಶಾಮಸ್ ನವಾಬ್ ಸಿದ್ದಿಕಿ ಅವರು ತನಗೆ ಮೋಸ ಮತ್ತು ವಂಚನೆ ಮಾಡಲು ಪ್ರಾರಂಭಿಸಿದರು. ತನ್ನ ಹಣವನ್ನು ಬಳಸಿಕೊಂಡು ಆಸ್ತಿಯನ್ನು ಖರೀದಿಸಿದರು ಎಂದು ಆರೋಪಿಸಲಾಗಿದೆ.

ಈ ವಂಚನೆಯ ಬಗ್ಗೆ ತಿಳಿದು ಪ್ರಶ್ನೆಗಳನ್ನು ಎತ್ತಿದಾಗ, ನವಾಜುದ್ದೀನ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ಶಾಮಸ್ ನವಾಬ್ ಸಿದ್ದಿಕಿ ಪತ್ನಿ ಆಲಿಯಾಳನ್ನು ಪ್ರೇರೇಪಿಸಿದ್ದಾರೆ. ಆಲಿಯಾ ಮತ್ತು ಶಾಮಸ್ ತನ್ನ 21 ಕೋಟಿ ರೂ. ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ.

ತನೆಗೆ ಆ ಆಸ್ತಿಯನ್ನು ಹಿಂದಿರುಗಿಸಬೇಕೆಂದು ಒತ್ತಾಯಿಸಿದಾಗ, ಶಾಮಸ್ ಮತ್ತು ಆಲಿಯಾ ಒಂದಾಗಿ ‘ಸಾಮಾಜಿಕ ಮಾಧ್ಯಮದಲ್ಲಿ ಕೆಟ್ಟದಾದ ವಿಡಿಯೋಗಳು ಮತ್ತು ಕಾಮೆಂಟ್‌ಗಳನ್ನು’ ಅಪ್‌ಲೋಡ್ ಮಾಡುವ ಮೂಲಕ ನಟನನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದರು ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ.

No Comments

Leave A Comment