ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ರಾಗಾ ಅನರ್ಹತೆ ಚುನಾವಣೆಯ ಮುನ್ನವೇ ಸೋಲೋಪ್ಪಿಕೊ೦ಡ ಮೋದಿ ಸರಕಾರ-ಸುರೇಶ್ ಶೆಟ್ಟಿ ಬನ್ನ೦ಜೆ
ಉಡುಪಿ: ಸಂಸತ್ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿಯವರ ಅನರ್ಹತೆ ಚುನಾವಣೆಗೆ ಮೊದಲೇ ಸೋಲೊಪ್ಪಿಕೊಂಡ ಮೋದಿ ಸರ್ಕಾರ.
ನಮ್ಮ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ಸನ್ಮಾನ್ಯ ರಾಹುಲ್ ಗಾಂಧಿಯವರನ್ನು ಸಂಸತ್ತಿನಲ್ಲಿ ಎದುರಿಸಲಾಗದೆ ಅವರು ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರವನ್ನು ನೀಡಲಾಗದೆ ಅವರಿಗೆ ಹೆದರಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅವರ ಸಂಸತ್ ಸದಸ್ಯವನ್ನು ಅನರ್ಹತೆ ಮಾಡುವಂತ ಒಂದು ಕೆಟ್ಟ ಕೆಲಸವನ್ನು ಮಾಡಿರುತ್ತಾರೆ .
ಸೂರತ್ ನ್ಯಾಯಾಲಯದಲ್ಲಿ ಅವರಿಗೆ ಎರಡು ವರ್ಷ ಶಿಕ್ಷೆ ಆದರೂ 30 ದಿನಗಳು ಒಳಗೆ ಮೇಲಿನ ಕೋರ್ಟಿಗೆ ಹೋಗಲು ಅವಕಾಶ ಇದ್ದರು ಅದೆಲ್ಲವನ್ನು ಮೂಲೆಗುಂಪು ಮಾಡಿ ರಾಹುಲ್ ಗಾಂಧಿಯವರು ಸಂಸತ್ತಿನ ಒಳಗೆ ಪ್ರವೇಶಿಸಿದರೆ ತಮ್ಮ ಮತ್ತು ಅದಾನಿಯವರ ನಂಟಿನ ಗುಟ್ಟು ಬಯಲಾಗುತ್ತದೆ ಎಂಬ ಹೆದರಿಕೆಯಿಂದ ಮೋದಿ ಹಾಗೂ ಬಿಜೆಪಿಯ ನಾಯಕರುಗಳು ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ಅನರ್ಹ ಗೊಳಿಸಿದ್ದು ಖ೦ಡನೀಯ ಯಾವ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಿದ್ದೀರೋ ಅದೇ ಸಂದರ್ಭದಲ್ಲಿ ಮುಂದಿನ ನಮ್ಮ ದೇಶದ ಪ್ರಧಾನಿ ರಾಹುಲ್ ಗಾಂಧಿಯವರು ಎಂದು ಸಾಬೀತಾಗಿದೆ ಎಂದು ಉಡುಪಿ ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ.