``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಹಿರಿಯ ಪತ್ರಕರ್ತ ವೇದ್ ಪ್ರತಾಪ್ ವೈದಿಕ್ ನಿಧನ

ನವದೆಹಲಿ: ಹಿರಿಯ ಪತ್ರಕರ್ತ ವೇದ್ ಪ್ರತಾಪ್ ವೈದಿಕ್ ಅವರು ಮಂಗಳವಾರ ಗುರುಗ್ರಾಮದ ತಮ್ಮ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.

“ಹಿರಿಯ ಪತ್ರಕರ್ತ ವೈದಿಕ್ ಅವರು ಇಂದು ಬೆಳಗ್ಗೆ ಅವರ ಗುರುಗ್ರಾಮದ ಮನೆಯಲ್ಲಿ ಬಾತ್ ರೂಮ್ ಗೆ ಹೋದಾಗ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿರುವುದಾಗಿ” ಎಂದು ಅವರ ಖಾಸಗಿ ಸಹಾಯಕ ಮೋಹನ್ ಅವರು ಪಿಟಿಐಗೆ ತಿಳಿಸಿದ್ದಾರೆ.

ವೈದಿಕ್ ಸಾಮಾನ್ಯವಾಗಿ ಆರೋಗ್ಯವಾಗಿದ್ದರು ಮತ್ತು ಸೋಮವಾರ ದೆಹಲಿಗೆ ಹೋಗಿದ್ದರು ಎಂದು ಅವರು ಹೇಳಿದ್ದಾರೆ.

ಹಿಂದಿ ಸುದ್ದಿ ಸಂಸ್ಥೆ ‘ಭಾಷಾ’ ದ ಸಂಸ್ಥಾಪಕ-ಸಂಪಾದಕರಾಗಿದ್ದ ವೈದಿಕ್ ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ(ಪಿಟಿಐ)ದಲ್ಲಿ ಕೆಲಸ ಮಾಡಿದ್ದಾರೆ.

ವೈದಿಕ್ ಅವರು ಟೈಮ್ಸ್ ಗ್ರೂಪ್‌ನ ನವಭಾರತ್ ಟೈಮ್ಸ್‌ನ ಸಂಪಾದಕ(ವೀಕ್ಷಣೆ)ರಾಗಿಯೂ ಸೇವೆ ಸಲ್ಲಿಸಿದ್ದಾರೆ.

No Comments

Leave A Comment