Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಬೆಳ್ತಂಗಡಿ: ಮಗುಚಿ ಬಿದ್ದ ಆಟೋ ರಿಕ್ಷಾ ಎಳೆಯ ಕಂದಮ್ಮ ದಾರುಣ ಸಾವು

ಬೆಳ್ತಂಗಡಿ: ಮಾಲಡಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಮಗುಚಿ ಬಿದ್ದು ಎಳೆಯ ಮಗುವೊಂದು ದಾರುಣವಾಗಿ ಮೃತಪಟ್ಟ ಘಟನೆ ಮಾಲಾಡಿಯಲ್ಲಿ ಸೋಮವಾರ ಸಂಭವಿಸಿದೆ.

ಕಾರ್ಕಳ ನಿಟ್ಟೆ ನಿವಾಸಿಗಳಾಗಿರುವ ಸಂತೋಷ್ ಹಾಗೂ ಗೀತಾ ದಂಪತಿಗಳ ಒಂದು ವರ್ಷದ ಮಗುವೇ ಅಪಘಾತದಲ್ಲಿವಮೃತಪಟ್ಟ ಮಗುವಾಗಿದೆ. ಇವರು ಸಂಬಂಧಿಕರ ಮನೆಗೆಂದು ಬಂದವರಾಗಿದ್ದಾರೆ. ಕೊಲ್ಪೆದ ಬೈಲಿನಿಂದ ಗರ್ಡಾಡಿಗೆ ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ  ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಅಪಘಾತದ ತೀವ್ರತೆಗೆ ಮಗು ತಾಯಿಯ ಕೈಯಿಂದ ರಸ್ತೆಗೆ ಎಸೆಯಲ್ಪಟ್ಟಿದೆ.

ರಿಕ್ಷಾದಲ್ಲಿದ್ದ  ಮಗುವಿನ ತಾಯಿ ಗೀತಾ ಹಾಗೂ ರತ್ನ ಎಂಬವರಿಗೆ ಗಾಯಗಳಾಗಿದೆ. ರಿಕ್ಷಾ ಚಾಲಕನಿಗೂ ಗಾಯಗಳಾಗಿದೆ. ರಸ್ತೆಗೆ ಎಸೆಯಲ್ಪಟ್ಟ ಮಗುವಿಗೆ ಹೊರನೋಟಕ್ಕೆ ಯಾವುದೇ ಗಾಯಗಳಾಗಿರಲಿಲ್ಲ, ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯದರು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಮಗು ಮೃತಪಟ್ಟಿತ್ತು  ಎನ್ನಲಾಗಿದೆ. ಘಟನೆಯ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment