Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಉಡುಪಿಯ ಎನ್ ಸೂರ್ಯನಾರಾಯಣ ಶೇಟ್ ನಿಧನ

ಉಡುಪಿ : ನಗರದ ಸಿಟಿ ಬಸ್ ಸ್ಟ್ಯಾಂಡ್ ಬಳಿ ಶಿರಿಬೀಡು ಟವರ್ ನ ನಿವಾಸಿ. ಎನ್ ಸೂರ್ಯನಾರಾಯಣಶೇಟ್ (84 ವರ್ಷ) ಜನವರಿ 21ರ ಶನಿವಾರದಂದು ನಿಧನರಾದರು.

ಮೃತರಿಗೆ ಎರಡು ಗಂಡು,ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ, ಕರ್ನಾಟಕ ರಾಜ್ಯ ಸರ್ಕಾರ ನಡೆಸುತ್ತಿದ್ದ ರಾಜ್ಯ ಲಾಟರಿ ಅಧಿಕೃತ ಡೀಲರ್ ಆಗಿದ್ದು, ಉಡುಪಿಯ ಪ್ರಸಿದ್ಧವಾಗಿದ್ದ ಮಾರುತಿ ವೀಥೀಕಾದಲ್ಲಿರುವ ನಾಗಶ್ರೀ ಲಾಟರಿ ಏಜೆನ್ಸಿ ನಡೆಸುತ್ತಿದ್ದರು.

ಮೃತರು ಕೊಡುಗೈದಾನಿಯಾಗಿದ್ದು, ಉಡುಪಿ ಮಾರುತಿವೀಥೀಕಾದ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿದ್ದು,, ಸೇವೆ ಸಲ್ಲಿಸಿದ್ದರು, ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡಿದ್ದು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ,, ಮಾರುತಿ ವೀಥೀಕಾದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಗುರುರಾಜ್ ಎಂ ಶೆಟ್ಟಿ. ಹಾಗೂ ಕಾರ್ಯದರ್ಶಿ ಗಣೇಶ್ ರಾಜ ಸರಳೇಬೆಟ್ಟು ಸಂತಾಪ ಸೂಚಿಸಿದ್ದಾರೆ.

No Comments

Leave A Comment