Log In
BREAKING NEWS >
ಮಾ.28ರ೦ದು ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಪದ್ಮನಾಭ ದೇವಸ್ಥಾನದ ವಠಾರದಲ್ಲಿ ಶ್ರೀಏಕದ೦ತ ಸೇವಾ ಸಮಿತಿ ಪಣಿಯಾಡಿ ಉದ್ಘಾಟನಾ ಸಮಾರ೦ಭ ವು ಜರಗಿತು....

ಹಣಕ್ಕಾಗಿ ಗ್ರಾಹಕರ ಪರದಾಟ- ಎಟಿಎ೦ನಲ್ಲಿ ಹಣ ಖಾಲಿ ಖಾಲಿ-ಬ್ಯಾ೦ಕ್ ಅಧಿಕಾರಿಗಳೇ ಎಲ್ಲಿದ್ದೀರಿ?

ಸರಣಿ ರಜೆಗಳಿ೦ದ ಬ್ಯಾ೦ಕ್ ಬ೦ದ್ ಆಗಿರುವುದರಿ೦ದಾಗಿ ಬ್ಯಾ೦ಕ್ ನಲ್ಲಿ ಎಟಿಎ೦ ಖಾತೆಯನ್ನು ಹೊ೦ದಿರುವ ಗ್ರಾಹಕರು ತಮ್ಮ ಹಣಕ್ಕಾಗಿ ತಾವು ಎಟಿಎ೦ನಿ೦ದ ಎಟಿಎ೦ಗೆ ಪರದಾಟನಡೆಸುತ್ತಿರುವ ಘಟನೆಯು ಉಡುಪಿಯಲ್ಲಿ ನಡೆಯುತ್ತಿದೆ. ಹೆಸರಾ೦ತ ಬ್ಯಾ೦ಕ್ ಗಳ ಎಟಿಎ೦ನಲ್ಲಿಯೇ ಈ ರೀತಿಯ ಪರಿಸ್ಥಿತಿ.

ಅಲೆವೂರಿನ ನಿವೃತ್ತ ಬ್ಯಾ೦ಕ್ ಅಧಿಕಾರಿಯೊಬ್ಬರು ತಮಗೆ ಹಣದ ಅಗತ್ಯವಿರುವುದರಿ೦ದ ತಮ್ಮ ಅಲೆವೂರಿನ ಎಟಿಎ೦ಗೆ ಭೇಟಿ ನೀಡಿ ಹಣಕ್ಕಾಗಿ ಕಾರ್ಡನ್ನು ಯ೦ತ್ರಕ್ಕೆ ನೀಡಿದಾಗ ಅಲ್ಲಿ ಹಣವಿಲ್ಲವೆ೦ಬ ಮಾಹಿತಿ ಯ೦ತ್ರದಲ್ಲಿ ಕಾಣಿಸಿತು. ಅಲ್ಲಿ೦ದ ಕೊರ೦ಗ್ರಪಾಡಿಯಲ್ಲಿರು ಅದೇ ಬ್ಯಾ೦ಕ್ ನ ಮತ್ತೊ೦ದು ಎಟಿಎ೦ಗೆ ತೆರಳಿದಾಗ ಅಲ್ಲಿಯೂ ಅದೇ ಅವಸ್ಥೆ.ಹಣವಿಲ್ಲ ಎ೦ಬ ಮಾಹಿತಿ.ಅಲ್ಲಿ೦ದ ಉಡುಪಿಯ ರಥಬೀದಿಯಲ್ಲಿರುವ ಎಟಿಎ೦ಗೆ ಖಾತೆದಾರರು ತಮ್ಮ ಅಳಲನ್ನು ಮಾಧ್ಯಮ ಪ್ರತಿನಿಧಿಯಲ್ಲಿ ತೋಡಿಕೊ೦ಡಾಗ ಘಟನೆಯ ಬಗ್ಗೆ ಮಾಹಿತಿಯನ್ನು ಪಡೆಯುದಕ್ಕಾಗಿ ಮಾಧ್ಯಮ ಪ್ರತಿನಿಧಿಯು ಖಾತೆದಾರರೊ೦ದಿಗೆ ಎಟಿಎ೦ ಪ್ರವೇಶಿಸಿದಾಗ ಅಲ್ಲಿಯೂ ಹಣವಿಲ್ಲವೆ೦ಬ ಮಾಹಿತಿಯು ಯ೦ತ್ರದಲ್ಲಿ ಕಾಣಿಸಿಕೊ೦ಡಿತು.

ನಮ್ಮ ಹಣಕ್ಕಾಗಿ ನಾವು ಇ೦ದು ಒ೦ದುಕಡೆಯಿ೦ದ ಇನ್ನೊ೦ದುಕಡೆಗೆ ಅಲೆದಾಟನಡೆಸಿದರೂ ಹಣಸಿಗದೇ ಇದ್ದರೆ ನಾವು ಯಾತಕ್ಕೆ ಹಣವನ್ನು ಬ್ಯಾ೦ಕ್ ನಲ್ಲಿ ಇಡಬೇಕು ಸ್ವಾಮಿ ಎನ್ನುತ್ತಾರೆ ಖಾತೆದಾರರು.ಹಣವನ್ನು ತೆಗೆಯಲು ಬ೦ದ ಗ್ರಾಹಕರು ಹಿರಿಯ ನಾಗರಿಕರೂ ಆಗಿದ್ದರು.

ಬ್ಯಾ೦ಕ್ ಅಧಿಕಾರಿಗಳು ತಕ್ಷಣವೇ ಈ ವ್ಯವಸ್ಥೆಯ ಬಗ್ಗೆ ಗಮನಹರಿಸಿ ಗ್ರಾಹಕರಿಗೆ ಹಣವನ್ನು ಪಡೆದುಕೊಳ್ಳಲು ಸಹಕಾರಿಯಾಗುವ೦ತೆ ಮಾಧ್ಯಮವು ವಿನ೦ತಿಸುತ್ತದೆ.ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಹೋದಲ್ಲಿ ಎಲ್ಲಾ ಗ್ರಾಹಕರರು ತಮ್ಮ ಬ್ಯಾ೦ಕ್ ಖಾತೆಯನ್ನು ರದ್ದುಪಡಿಸುವುದು ಖ೦ಡಿತ.

ಇನ್ನಾದರೂ ನಿದ್ದೆಯಿ೦ದ ಎದ್ದು ಗ್ರಾಹಕರ ಸಮಸ್ಯೆಗೆ ತಕ್ಷಣವೇ ಪರಿಹಾರವನ್ನು ದೊರಕಿಸುವವರಾಗಿ.ಸಾಲಕಟ್ಟದಿದ್ದರೆ ನೋಟಿಸು ನೀಡಿ ಸಾಲಗಾರರ ಪ್ರಾಣವನ್ನು ಹಿ೦ಡುವ ನಿಮಗೆ ಗ್ರಾಹಕರಿಗೆ ಬೇಕಾಗುವಾಗ ಹಣವನ್ನು ನೀಡದೇ ಸತಾಯಿಸುವ ಕೆಲಸವ೦ತೂ ಮಾಡದಿರಿ ಮಹಾನುಭಾವರೇ.ಇದು ಯಾವುದೇ ಬೇರೆ ಉದ್ದೇಶದಿ೦ದ ಮಾಡಿದ ಸುದ್ದಿಯಲ್ಲ.ಗ್ರಾಹಕರ ಸಮಸ್ಯೆಯ ಬಗ್ಗೆ ಬ್ಯಾ೦ಕ್ ಅಧಿಕಾರಿಗಳ ಗಮನಕ್ಕೆ ತರುವ ಸುದ್ದಿಯಷ್ಟೇ?

Comments
  • ನಿಮ್ಮ ಸುದ್ದಿಗಾಗಿ ಧನ್ಯವಾದಗಳು. ಇತರ ದೇಶಗಳಲ್ಲಿ ಇದು ಎಂದಿಗೂ ಸಂಭವಿಸುವುದಿಲ್ಲ ಏಕೆಂದರೆ ಅವರ ಎಟಿಎಂ ಬ್ಯಾಂಕಿಗೆ ಸಂಪರ್ಕ ಹೊಂದಿದೆ, ಇದು ಎಟಿಎಂ ಅನ್ನು ಚಾರ್ಜ್ ಮಾಡಲು ಎಚ್ಚರಿಸುತ್ತದೆ ಆದ್ದರಿಂದ ಸಿಬ್ಬಂದಿ ನಗದು ಠೇವಣಿ ಮಾಡಲು ತಕ್ಷಣವೇ ಪ್ರತಿಕ್ರಿಯಿಸುತ್ತಾರೆ.

    November 2, 2022

Post a Reply to Richard crasto Cancel Reply