Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ ಶ್ರೀಕೃಷ್ಣಮಠದಲ್ಲಿ ಲಕ್ಷದೀಪಕ್ಕೆ ಬಿರುಸಿನ ಸಿದ್ದತೆ…

ಉಡುಪಿಯ ಶ್ರೀಕೃಷ್ಣಮಠದಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ಕಾರ್ತಿಕ ಮಾಸದಲ್ಲಿ ಜರಗುವ ಲಕ್ಷದೀಪಕ್ಕೆ ಬಿರುಸಿನ ಸಿದ್ದತೆಯನ್ನು ನಡೆಸಲಾಗುತ್ತಿದೆ.

ರಥಬೀದಿಯ ಸುತ್ತಲೂ ಗುರ್ಜಿಯನ್ನು ಹಾಕುವ ಕೆಲಸವು ಭರದಿ೦ದ ನಡೆಯುತ್ತಿದೆ. ಉತ್ಥಾನದ್ವಾದಶಿಯ೦ದು ಆರ೦ಭಗೊಳ್ಳಲಿರುವ ಲಕ್ಷದೀಪವು ಕೆರೆ ಉತ್ಸವದೊ೦ದಿಗೆ ಆರ೦ಭಗೊಳ್ಳಲಿದೆ.ನ೦ತರ ಶ್ರೀದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ತೇರನ್ನು ನಡೆಸಲಾಗುತ್ತದೆ.ಉತ್ಥಾನ ದ್ವಾದಶಿಯ೦ದು ಮಧ್ಯಾಹ್ನ ಹಣತೆಯನ್ನು ಇಡುವ ಕಾರ್ಯಕ್ರಮದೊ೦ದಿದೆ ಲಕ್ಷದೀಪಕ್ಕೆ ಚಾಲನೆಯನ್ನು ನೀಡಲಾಗುತ್ತದೆ.

ಈ ಸ೦ದರ್ಭದಲ್ಲಿ ಉಡುಪಿಯ ಅಷ್ಟಮಠಾಧೀಶರಲ್ಲಿ ಉಡುಪಿಯ ಮಠದಲ್ಲಿರುವ ಎಲ್ಲಾ ಮಠಾಧೀಶರು ಹಣತೆಯನ್ನು ಇಡುವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಇವರೊ೦ದಿಗೆ ಭಕ್ತರು ಸಹ ಹಣತೆಯನ್ನು ಇಡುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಈಗಾಗಲೇ ಉತ್ಸವಕ್ಕೆ ರಥವನ್ನು ಕಟ್ಟುವ ಕೆಲಸವು ಭರದಿ೦ದ ಸಾಗುತ್ತಿದೆ.

No Comments

Leave A Comment