Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಉಡುಪಿ: ಪಿಕಪ್ ವಾಹನ ಡಿಕ್ಕಿ ಹೊಡೆದು ಪಾದಚಾರಿ ಮೃತ್ಯು

ಡುಪಿ, ಅ 10 : ಪಿಕಪ್ ವಾಹನ ಚಾಲಕನ ಅಜಾಗರೂಕತೆಯಿಂದ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ಶಿರ್ವದ ನ್ಯಾರ್ಮಾದ ಜಯರಾಮ್ ಸರ್ವೀಸ್ ಸ್ಟೇಷನ್ ಬಳಿ ಅಕ್ಟೋಬರ್ 9 ರ ಭಾನುವಾರ ರಾತ್ರಿ ಸಂಭವಿಸಿದೆ.

ಮೃತರನ್ನು ಶಿರ್ವ ಮಸೀದಿ ಬಳಿ ವಾಸವಾಗಿರುವ ದೂರುದಾರರಾದ ಸ್ಟ್ಯಾನಿ ಬ್ರಿಟ್ಟೋ (60) ಅವರ ಕಿರಿಯ ಸಹೋದರ ಯುಜೀನ್ ಬ್ರಿಟ್ಟೋ (50) ಎಂದು ಗುರುತಿಸಲಾಗಿದೆ.

ಶಿರ್ವ ಪೊಲೀಸ್ ಠಾಣೆ ಜಯರಾಮ ಸರ್ವೀಸ್ ಸ್ಟೇಷನ್ ಬಳಿಯ ರಸ್ತೆಯ ಫುಟ್ ಪಾತ್ ನಲ್ಲಿ ಯುಜೀನ್ ನಡೆದುಕೊಂಡು ಹೋಗುತ್ತಿದ್ದಾಗ ಅಲೆಕ್ಸ್ ಜೋಸೆಫ್ ಬಾರ್ಬೋಜಾ ಅವರು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಯುಜೀನ್ ಅವರನ್ನು ಪಿಕಪ್ ಚಾಲಕ ಅಜ್ಜರಕಾಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ರಾತ್ರಿ 9.40ಕ್ಕೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment