ಬೆಂಗಳೂರು: ಉಬರ್, ಓಲಾ ಆಟೋ ಚಾಲಕರಿಂದ ಆರ್ ಟಿ ಒ ಕಚೇರಿಗೆ ಮುತ್ತಿಗೆ, ಪ್ರತಿಭಟನೆ
ಬೆಂಗಳೂರು: ಉಬರ್, ಓಲಾ ಆಟೋ ಚಾಲಕರಿಂದು ಜಯನಗರ ಆರ್ ಟಿಒ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಉಬರ್, ಓಲಾ ಕಂಪನಿಗೆ ನೀಡಿದ್ದ ಗಡುವು ಅಂತ್ಯ ಹಿನ್ನೆಲೆ ಆರ್ಟಿಒ ಅಧಿಕಾರಿಗಳಿಂದ ವಾಹನಗಳನ್ನು ಸೀಜ್ ಮಾಡಿರುವುದನ್ನು ಖಂಡಿಸಿ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಆಟೋ ಸೇವೆಗೆ ಓಲಾ-ಉಬರ್ ಸಂಸ್ಥೆಗಳು ಪ್ಲಾಟ್ಫಾರ್ಮ್ ಹೆಸರಲ್ಲಿ ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ. ಸೇವೆ ನಿಲ್ಲಿಸುವಂತೆ ಸಾರಿಗೆ ಇಲಾಖೆ ನೋಟಿಸ್ ನೀಡಿದೆ. ಆದ್ರೆ ಓಲಾ, ಉಬರ್ ಸಂಸ್ಥೆಗಳು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕ್ಯಾಬ್ ಸೇವೆಗೆ ಮಾತ್ರ ಅನುಮತಿಯಿದ್ದು, ಆಟೋ ಸೇವೆ ನಿಲ್ಲಿಸಿ ಅಂತ ಓಲಾ, ಉಬರ್, ರಾಪಿಡ್ ಗೆ ನೋಟಿಸ್ ನೀಡಿ 3 ದಿನ ಗಡುವು ನೀಡಿತ್ತು.
ಓಲಾ, ಉಬರ್ ಕಂಪನಿಗಳು ನಿಯಮ ಗಾಳಿಗೆ ತೂರಿ ಟ್ಯಾಕ್ಸಿ ಜೊತೆ ಆಟೋ ಸೇವೆ ನೀಡ್ತಿದೆ. ಸರ್ಕಾರ ಆಟೋ ಪ್ರಯಾಣಕ್ಕೆ ದರ ನಿಗದಿ ಮಾಡಿದೆ. ಆಟೋರಿಕ್ಷಾಗಳಿಗೆ ಮೊದಲ 2 ಕಿ.ಮೀ.ಗಳಿಗೆ 30 ರೂಪಾಯಿ, 2 ಕಿಲೋ ಮೀಟರ್ ಬಳಿಕ ಪ್ರತಿ ಕಿಲೋ ಮೀಟರ್ಗೆ 15 ರೂಪಾಯಿ ನಿಗದಿ ಮಾಡಿದೆ. ರಾತ್ರಿ 10 ಗಂಟೆ ಬಳಿಕ ಬೆಳಗ್ಗೆ 5ವು ಗಂಟೆವರೆಗೂ ಬಾಡಿಗೆ ಶೇ.50ರಷ್ಟು ಹೆಚ್ಚಿಸಬಹುದು ಎಂದು ಹೇಳಿದೆ.
ಆದರೆ, ಈ ನಿಯಮವನ್ನು ಓಲಾ, ಉಬರ್ , ರಾಪಿಡೋ ಅನುಸರಿಸುತ್ತಿಲ್ಲ. 2 ಕಿ.ಮೀಟರ್ಗೆ 100 ರೂಪಾಯಿ ಪಡೆದು, ಆಟೋ ಚಾಲಕರಿಗೆ 60 ರೂಪಾಯಿ ನೀಡಿ 40 ರೂಪಾಯಿಯನ್ನು ದೋಚುತ್ತಿವೆ.