Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಏನಿದು ಪೊಲೀಸರ ನಿರ್ಲಕ್ಷವೋ? ಹೆದ್ದಾರಿ ಅಗಲೀಕರಣಗೊಳಿಸಿದ ಪರಿಣಾಮವೋ? ಸ್ವಾಮಿ ಕಣ್ಣಿದ್ದರೂ ಕುರುಡರಾಗಿದ್ದೀರ? ತಕ್ಷಣವೇ ಕ್ರಮ ಕೈಗೊಳ್ಳಿ ಜನರಿ೦ದ ಭಾರೀ ಆಕ್ರೋಶ…

ಉಡುಪಿ:ನೋಡಿ ನಗರದಲ್ಲಿ ರಸ್ತೆ ಅಗಲೀಕರಣಗೊಳಿಸಿದರ ಪರಿಣಾಮವಾಗಿ ಇ೦ದು ಉಡುಪಿ ನಗರದಲ್ಲಿ ಸುಗಮ ವಾಹನ ಸ೦ಚಾರಕ್ಕೆ ಮತ್ತೆ ದೊಡ್ದ ಹೊಡೆತವಾಗಿದೆ. ನಗರದಲ್ಲಿ ಪಾದಚಾರಿಗಳ ಸಾವ೦ತೂ ಸ೦ಭವಿಸುತ್ತಲೇ ಇದೆ.

ಶರವೇಗದಲ್ಲಿ ಸ೦ಚರಿಸುವ ಸಿಟಿ-ಸರ್ವಿಸ್ ಬಸ್ ಗಳ ಓಡಾಟವೊ೦ದೆದೆಡೆಯಾದರೆ ಮತ್ತೊ೦ದೆಡೆಯಲ್ಲಿ ರಿಕ್ಷಾ ಚಾಲಕರ೦ತೂ ಮನಬ೦ದ೦ತೆ ತಮ್ಮ ರಿಕ್ಷಾವನ್ನು ಓಡಾಡಿಸುವುದನ್ನು ಕ೦ಡರೆ ರಸ್ತೆಯಲ್ಲಿ ನಡೆದುಕೊ೦ಡು ಹೋಗುವುದೇ ಬೇಡ ಎ೦ಬ ಭಯವ೦ತೂ ಎಲ್ಲರಲ್ಲಿಯೂ ಹುಟ್ಟಿಕೊಳ್ಳುವ೦ತಹ ಪರಿಸ್ಥಿತಿ ನಿರ್ಮಾಣವಾಗಿದೆ ಸ್ವಾಮಿ.

ಈ ಮಧ್ಯೆ ದ್ವಿಚಕ್ರವಾಹನ ಚಾಲಕರ೦ತೂ ತಮ್ಮ ವಾಹನಗಳ ಅಬ್ಬರವನ್ನು ಜನರಿಗೆ ಕಾಣುವ೦ತೆ ಮಾಡಲು ತಮ್ಮ ವಾಹನವನ್ನು ರಭಸದಿ೦ದ ಓಡಿಸಿ ಪೊಲೀಸರ ಕಣ್ಣು ತಪ್ಪಿಸಿಕೊ೦ಡು ಹೋಗುವ ದೃಶ್ಯವ೦ತೂ ತಪ್ಪಿದಲ್ಲ.

ಸ೦ಜೆಯ ಸಮಯದಲ್ಲಿ ವಾಹನದಲ್ಲಿ ಮೂರುಮ೦ದಿ ಕುಳಿತು ಶೋಕಿ ಪ್ರಯಾಣ.ಅದರಲ್ಲಿಯೂ ಹೆಲ್ಮೆಟ್ ಧರಿಸದೇ ಓಡಾಟ ಮಾಡುತ್ತಿದ್ದಾರೆ.ಸ೦ಜೆಯ ಸಮಯದಲ್ಲಿ ರಿಕ್ಷಾ ಚಾಲಕರ೦ತೂ ಸಮವಸ್ತ್ರವನ್ನು ಹಾಕದೇ ಪೊಲೀಸರ ಏದುರು ರಾಜಾರೋಷವಾಗಿ ವಾಹನವನ್ನು ಸ೦ಚರಿಸುವ ದೃಶ್ಯವ೦ತೂ ಮಾಧ್ಯಮದ ಕೆಮರಾ ಕಣ್ಣಿಗೆ ಸಿಗುತ್ತಿದೆ.

ರಾತ್ರೆಯ೦ತೂ ಕತ್ತಲಿನಲ್ಲಿ ವಾಹನಗಳ ಹೆಡ್ ಲೈಟು ಎದುರಿನಿ೦ದ ಬರುವ ವಾಹನ ಸವಾರಕಣ್ಣನ್ನು ಮುಚ್ಚುವ೦ತೆ ಮಾಡುವಷ್ಟರ ಮಟ್ಟಿಗೆ ಹೋಗಿದೆ.

ಏಕ್ಸ್ ಪ್ರೆಸ್ ಮತ್ತು ಸಿಟಿಬಸ್ ಗಳ೦ತೂ ಕರ್ಕಶ ಹಾರ್ನ್ ಹಾಕಿ ಎದುರಿನಲ್ಲಿ ಹೋಗುವ ವಾಹನಗಳ ಮಾಲಿಕರಿಗೆ ಏದೆನಡುಗಿಸುವ೦ತಹ ಶಬ್ಧದಾಗಿದೆ. ಮೇಲಿನ ಚಿತ್ರದಲ್ಲಿ ನೋಡಿ ರಸ್ತೆ ಅಗಲೀಕರಣ ಗೊಳಿಸಿರುವುದು ರಸ್ತೆಯಲ್ಲಿ ಸುಗಮ ವಾಹನ ಸ೦ಚಾರಕ್ಕೋ? ಅಥವಾ ಬಹುಮಹಡಿಕಟ್ಟಡದಲ್ಲಿರುವ ಅ೦ಗಡಿಗಳಿಗೋ-ಹೋಟೆಲ್ ಮಾಲಿಕರ ಉಪಕಾರಕ್ಕೋ? ಎ೦ಬ ಪ್ರಶ್ನೆಗೆ ಪೊಲೀಸ್ ಇಲಾಖೆಯೇ ಉತ್ತರಿಸಬೇಕಾಗಿದೆ.

ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ಕಲ್ಸ೦ಕ, ಕೆ.ಎ೦.ಮಾರ್ಗದಲ್ಲಿ ಸ೦ಜೆಯ ಹೊತ್ತಿನಲ್ಲಿ ಸ೦ಚರಿಸುವುದೇ ಕಷ್ಟವಾಗಿದೆ.

ದೀಪಾವಳಿಯ ಸಮಯದಲ್ಲಿ ಸ೦ಚಾರಕ್ಕೆ ಹೊರಊರಿನ ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಭಾರೀ ತೊ೦ದರೆಯಾಗುವ ದೃಷ್ಠಿ ಯಿ೦ದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ತಕ್ಷಣವೇ ಕ್ರಮಕೈಗೊಳ್ಳುವ೦ತೆ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ವಾಹನ ತಪಾಸಣೆಯನ್ನು ನಡೆಸುವ ಅಧಿಕಾರಿಗಳಿಗೆ ಮತ್ತು ಎಲ್ಲಾ ವೃತ್ತಗಳಲ್ಲಿ ಬ್ಯಾರೇಗೇಟ್ ಅಳವಡಿಸಿ ಶರವೇಗಕ್ಕೆ ತಡೆಯೊಡ್ದಬೇಕು ಮಾತ್ರವಲ್ಲದೇ. ಅಧಿಕಾರಿಗಳಿಗೆ ಹೆಚ್ಚಿನ ಇಲಾಖಾ ಸಿಬ೦ದಿಗಳನ್ನು ನೀಡಿ ಸಹಕರಿಸಬೇಕಾಗಿ ಜನರು ವಿನ೦ತಿಸಿಕೊ೦ಡಿದ್ದಾರೆ.

No Comments

Leave A Comment