Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಹಿಂದಿ ಅವತರಣಿಕೆಯಲ್ಲಿ ಅಕ್ಟೋಬರ್ 14ಕ್ಕೆ ಕನ್ನಡದ ‘ಕಾಂತಾರ’ ಸಿನಿಮಾ ಬಿಡುಗಡೆ

ಮುಂಬೈ: ಕನ್ನಡ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿರುವ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರಾ ಸಿನಿಮಾದ ಹಿಂದಿ ಆವೃತ್ತಿಯನ್ನು ಅಕ್ಟೋಬರ್ 14 ರಂದು ಬಿಡುಗಡೆ ಮಾಡುವುದಾಗಿ ಭಾನುವಾರ ಹೊಂಬಾಳೆ ಫಿಲಂಸ್ ಪ್ರಕಟಿಸಿದೆ.

ರಿಷಬ್ ಶೆಟ್ಟಿ ಬರೆದು, ನಿರ್ದೇಶಿಸಿದ ಮತ್ತು ನಟಿಸಿರುವ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಸೆಪ್ಟೆಂಬರ್ 30 ರಂದು ಬಿಡುಗಡೆಯಾಯಿತು. ಅಂದಿನಿಂದ ಇಂದಿನವರೆಗೂ ಚಿತ್ರಮಂದಿರಳಲ್ಲಿ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ.

ಹೊಂಬಾಳೆ ಫಿಲಂಸ್‌ನ ನಿರ್ಮಾಪಕ ವಿಜಯ್ ಕಿರಗಂದೂರು ಮಾತನಾಡಿ, ಮುಂಬರುವ ವಾರಗಳಲ್ಲಿ ಇನ್ನಷ್ಟು ಭಾಷೆಗಳಲ್ಲಿ ‘ಕಾಂತಾರ’ ಬಿಡುಗಡೆ ಮಾಡುವ ಯೋಜನೆ ಇದೆ. ‘ನಾವು ಹೆಮ್ಮೆಪಡುವ ನಮ್ಮ ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ಜಗತ್ತು ನೋಡಬೇಕೆಂದು ನಾವು ಬಯಸುತ್ತೇವೆ’ ಎಂದು ಹೇಳಿದ್ದಾರೆ.

ವಿಜಯ್ ಕಿರಂಗಂದೂರು ಅವರ ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಕಾಂತಾರ ಚಿತ್ರದಲ್ಲಿ ಕಿಶೋರ್, ಸಪ್ತಮಿ ಗೌಡ, ಪ್ರಕಾಶ್ ತೂಮಿನಾಡ್, ಪ್ರಮೋದ್ ಶೆಟ್ಟಿ ಮತ್ತು ಅಚ್ಯುತ್ ಕುಮಾರ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ದಕ್ಷಿಣ ಕನ್ನಡದ ಕಾಲ್ಪನಿಕ ಹಳ್ಳಿಯಲ್ಲಿ ನಡೆಯುವ, ‘ಕಾಂತಾರ’ ಕಂಬಳ ಚಾಂಪಿಯನ್ ಅನ್ನು ಅನುಸರಿಸುತ್ತದೆ. ಕಂಬಳವು ಕರಾವಳಿ ಕರ್ನಾಟಕದಲ್ಲಿ ನವೆಂಬರ್‌ನಿಂದ ಮಾರ್ಚ್‌ವರೆಗೆ ನಡೆಯುವ ವಾರ್ಷಿಕ ಕಾರ್ಯಕ್ರಮವಾಗಿದೆ.

ಕಾಂತಾರ ಸಿನಿಮಾ ತಮ್ಮ ಹಿಂದಿನ ಚಿತ್ರ ಕೆಜಿಎಫ್‌ಗಿಂತ ಭಿನ್ನವಾಗಿದೆ. ಕೆಜಿಎಫ್ ಚಿನ್ನದ ಗಣಿಯ ಹಿನ್ನೆಲೆಯಲ್ಲಿ ನಡೆದರೆ, ಕಾಂತಾರವು ಗ್ರಾಮೀಣ ಒಳನಾಡಿನಲ್ಲಿ ನಡೆಯುವ ಪರಿಸರದ ಸಿನಿಮಾವಾಗಿದೆ.

ಈ ಚಿತ್ರವು ಕರಾವಳಿ ಕರ್ನಾಟಕದ ಆಕರ್ಷಕ ಭೂಪ್ರದೇಶಗಳ ಪವಿತ್ರ ಪದ್ಧತಿಗಳು, ಸಂಪ್ರದಾಯಗಳು, ಗುಪ್ತ ನಿಧಿಗಳು ಮತ್ತು ಪೀಳಿಗೆಯ ರಹಸ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ವಿಜಯ್ ಹೇಳುತ್ತಾರೆ.

ಚಿತ್ರದ ಹಿಂದಿ ಆವೃತ್ತಿಯನ್ನು ಭಾರತದಾದ್ಯಂತ 800ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಯಾರಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No Comments

Leave A Comment