Log In
BREAKING NEWS >
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

120 ಕೋಟಿ ರೂ. ಮೌಲ್ಯದ ಡ್ರಗ್ಸ್ ಪ್ರಕರಣ: ಮಾಜಿ ಏರ್ ಇಂಡಿಯಾ ಪೈಲಟ್ ಸೇರಿ 6 ಮಂದಿ ಬಂಧನ!

ನವದೆಹಲಿ: ಮುಂಬೈ ನ ನಾರ್ಕೊಟಿಕ್ಸ್ ನಿಯಂತ್ರಣ ಬ್ಯುರೋ (ಎನ್ ಸಿಬಿ) ಸುಮಾರು 120 ಕೋಟಿ ರೂಪಾಯಿ ಮೌಲ್ಯದ 60 ಕೆ.ಜಿಯಷ್ಟು ಮೆಫೆಡ್ರೋನ್ ಡ್ರಗ್ ನ್ನು ವಶಕ್ಕೆ ಪಡೆದಿರುವ ಪ್ರಕರಣದಲ್ಲಿ ಏರ್ ಇಂಡಿಯಾದ ಮಾಜಿ ಪೈಲಟ್ ಕೂಡ ಶಾಮೀಲಾಗಿದ್ದಾರೆ.

ಮುಂಬೈ ಮತ್ತು ಗುಜರಾತ್ ಗಳಲ್ಲಿ ಈ ಡ್ರಗ್ ಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಜಾಲದ ಕಿಂಗ್ ಪಿನ್ ನ್ನು ಸೋಹೈಲ್ ಗಫಾರ್ ಮಹಿದಾ, ಏರ್ ಇಂಡಿಯಾದ ಮಾಜಿ ಪೈಲಟ್ ಹಾಗೂ ಮಿತಿ ಪಿಚೈದಾಸ್ ಎಂದು ಗುರುತಿಸಲಾಗಿದ್ದು, (ಕಂದಾಯ ಗುಪ್ತಚರ ನಿರ್ದೇಶನಾಲಯ)  ಡಿಆರ್ ಐ ಬಂಧನಕ್ಕೊಳಪಡಿಸಿದೆ.

ಸೋಹಾಲಿ ಗಫಾರ್ ಮಹಿದಾ 2016-2018 ವರೆಗೆ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವೈದ್ಯಕೀಯ ಕಾರಣದಿಂದಾಗಿ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು.

ತಮಗೆ ಲಭ್ಯವಾದ ಸುಳಿವಿನ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ್ದ ಎನ್ ಸಿಬಿ 50 ಕೆಜಿಗಳಷ್ಟು ಎಂಡಿ ಡ್ರಗ್ಸ್ ನ್ನು ಮುಂಬೈ ನ ಗೋದಾಮಿನಿಂದ ವಶಕ್ಕೆ ಪಡೆದಿದ್ದರು. ಅ.03 ರಂದು ಎನ್ ಸಿಬಿಯ ಮುಂಬೈ ವಿಭಾಗೀಯ ಘಟಕ, ದಾಳಿ ನಡೆಸಿ, ಜಾಮ್ ನಗರದಲ್ಲಿ 10 ಕೆ.ಜಿಯಷ್ಟು ಮೆಫೆಡ್ರೋನ್ ನ್ನು ವಶಕ್ಕೆ ಪಡೆದಿತ್ತು.

No Comments

Leave A Comment