ಮುಂಬೈ ವಿಮಾನ ನಿಲ್ದಾಣದಲ್ಲಿ 34 ಕೋಟಿ ರೂ. ಮೌಲ್ಯದ ಹೆರಾಯಿನ್ ಜಪ್ತಿ, ಓರ್ವನ ಬಂಧನ
ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಬೈ ಕಸ್ಟಮ್ಸ್ ಅಧಿಕಾರಿಗಳು ಭಾನುವಾರ 5 ಕಿಲೋಗ್ರಾಂಗಳಷ್ಟು ಹೆರಾಯಿನ್ ವಶಪಡಿಸಿಕೊಂಡಿದ್ದು, ಇದರ ಮೌಲ್ಯ ಅಂದಾಜು 34 ಕೋಟಿ ಎನ್ನಲಾಗಿದೆ.
ವಿಮಾನ ನಿಲ್ದಾಣದ ಟ್ರಾಲಿ ಬ್ಯಾಗ್‌ನೊಳಗೆ ಹೆರಾಯಿನ್ ಪತ್ತೆಯಾಗಿದೆ. ಹೆರಾಯಿನ್ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ 34.79 ಕೋಟಿ ರೂಪಾಯಿ ಮೌಲ್ಯದ 4970 ಗ್ರಾಂ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಒಬ್ಬ ಪ್ರಯಾಣಿಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಟ್ರಾಲಿ ಬ್ಯಾಗ್‌ನೊಳಗೆ ವಿಶೇಷವಾಗಿ ತಯಾರಿಸಿದ ಕುಳಿಯಲ್ಲಿ ನಿಷೇಧಿತ ಹೆರಾಯಿನ್ ಪತ್ತೆಯಾಗಿದೆ” ಎಂದು ಮುಂಬೈ ಕಸ್ಟಮ್ಸ್ ವಲಯ III ಭಾನುವಾರ ಟ್ವೀಟ್ ಮಾಡಿದೆ.