Log In
BREAKING NEWS >
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

1ಕೋಟಿ ರೂ ವೆಚ್ಚದಲ್ಲಿ ಉಡುಪಿ ಶ್ರೀ ಕಾಣಿಯೂರು ಮಠದಲ್ಲಿ ನೂತನ ಕಾಷ್ಠಶಿಲ್ಪದ ಸಿಂಹಾಸನ ಅರ್ಪಣೆ

ಉಡುಪಿ:ಉಡುಪಿಯ ಶ್ರೀ ಕಾಣಿಯೂರು ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಕಾಷ್ಠಶಿಲ್ಪದ ಕೆತ್ತನೆಗಳಿಂದ ಕೂಡಿದಂತಹ ಸಿಂಹಾಸನವನ್ನು ಪರ್ಯಾಯ ಶ್ರೀ ಕೃಷ್ಣಾಪುರದ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ದೀಪಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸುಮಾರು 1ಕೋಟಿ ರೂಪಾಯಿ ವೆಚ್ಚಗಳ ಮೂಲಕ ನಿರ್ಮಾಣ ಗೊಂಡಿರುವ ಈ ಸಿಂಹಾಸನ ಕಾಷ್ಠಶಿಲ್ಪದ ಮೆರುಗನ್ನು ಎತ್ತಿ ತೋರಿಸುತ್ತಿದೆ ಶ್ರೀ ಕಾಣಿಯೂರು ಮೂಲ ಮಠದಿಂದ ತಂದ ತೇಗದಮರ (ಸಾಗುವಾನಿ) ಹಾಗೂ ಬೀಟಿ (ರೋಸ್ ವುಡ್) ಮರದಿಂದ ದಶಾವತಾರಗಳ ಮೂರ್ತಿಗಳು ,ಮಧ್ವಾಚಾಚಾರ್ಯರು ವಾದಿರಾಜರು, ಇದರಿಂದ ಕೂಡಿರತಕ್ಕಂತಹ ನಾನಾತರಹವಾದ ಶಿಲ್ಪಕಲೆಯ ಕೆತ್ತನೆಯನ್ನು ಹೊಂದಿರತಕ್ಕಂತಹ ವಿಶಿಷ್ಟವಾದ ಕಲೆಗಳಿಂದ ಕೂಡಿರತಕ್ಕಂತಹ ಅದರಿಂದಲೇ ಒಂದು ಮೆರುಗನ್ನು ನೀಡತಕ್ಕಂತಹ ಸಿಂಹಾಸನವನ್ನು ನಿರ್ಮಾಣಮಾಡಿ ನರಸಿಂಹ ದೇವರಿಗೆ ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರು ಶ್ರೀ ಕೃಷ್ಣಾಪುರ ಶ್ರೀಪಾದರ ಮೂಲಕ ಅರ್ಪಣೆಮಾಡಿದರು.

No Comments

Leave A Comment