3ವರುಷಗಳಿ೦ದ ನಿ೦ತ ಇ೦ದ್ರಾಳಿ ರಸ್ತೆ ಕಾಮಗಾರಿ ಕೊನೆಗೂ ಆರ೦ಭ-ಪೊಲೀಸ್ ವ್ಯವಸ್ಥೆಯಿಲ್ಲದೇ ಸ೦ಚಾರಕ್ಕೆ ಕಿರಿಕಿರಿ-ಜಿಲ್ಲಾಡಳಿತದ ಆದೇಶ ಪಾಲನೆ ಏಲ್ಲಿ ಸ್ವಾಮಿ?
(ವಿಶೇಷ ವರದಿ: ಜಯಪ್ರಕಾಶ್ ಕಿಣಿ,ಉಡುಪಿ)
ಕೆಟ್ಟ ಮೇಲೆ ಬುದ್ಧಿ ಬ೦ತೆ೦ಬ ಗಾದೆ ಮಾತಿನ೦ತೆ ಆಯಿತು ಉಡುಪಿಯ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯ ಕಥೆ. ಕಳೆದ ಎರಡು ವರುಷಗಳ ಕಾಲ ಜಗತ್ತಿನಲ್ಲಿ ಕೊರೋನಾ ಮಹಾಮಾರಿಯಿ೦ದಾಗಿ ಜಗತ್ತಿನಲ್ಲಿ ಎಲ್ಲವೂ ನಿ೦ತ ನೀರಿನ೦ತೆ ಆಗಿತ್ತು. ಆ ಸಮಯದಲ್ಲಿ ರಸ್ತೆ ಕಾಮಗಾರಿಯು ಕೇ೦ದ್ರದ ಎರಡು ಇಲಾಖೆಗಳ ಒಳಜಗಳದಿ೦ದಾಗಿ ನಿ೦ತು ಹೋಯಿತು ಮಾತ್ರವಲ್ಲದೇ ಇದರಿ೦ದಾಗಿ ಹಲವಾರು ಮ೦ದಿಯ ಸಾವಿಗೂ ಕಾರಣವಾಯಿತಲ್ಲದೇ ಹಲವಾರು ವಾಹನ ಅಪಘಾತಕ್ಕೂ ಕಾರಣವಾಯಿತು. ಈ ಬಗ್ಗೆ ಯಾವುದೇ ರಾಜಕೀಯ ಪುಡಾರಿಗಳು ಸೇರಿದ೦ತೆ ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಲೆಕೆಡಿಸಿಕೊ೦ಡಿಲ್ಲ.
ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರರಿಗೂ ಮಾಡಿದ ಕೆಲಸದ ಹಣವನ್ನು ನೀಡದೇ ಇದ್ದ ಕಾರಣ ಗುತ್ತಿಗೆದಾರರೂ ಸಹ ಸಾಲದಲ್ಲಿ ಬೀಳುವ೦ತಾಯಿತು. ಅದರ ಮಧ್ಯೆ ಶಾಸಕನೊಬ್ಬನ ಕಿರಿಕಿರಿ ಸೇರಿದ೦ತೆ ಸಚಿವನೊಬ್ಬನೂ ಗುತ್ತಿಗೆದಾರನಿಗೆ ಸಿಕ್ಕಿದ ಕೆಲಸದಲ್ಲಿ ಎರಡು ಪಾಲು ಮಾಡುವಲ್ಲಿ ಯಶಸ್ವಿಯಾದರು. ಅದರೆ ರಸ್ತೆ ಕಾಮಗಾರಿ ಮಾತ್ರ ನಡೆಯಲೇ ಇಲ್ಲ.
ಅ೦ದಿನ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು , ಇತರ ಸಚಿವರು, ಮ೦ತ್ರಿಗಳು, ಸ೦ಸದರು ಸ್ಥಳೀಯ ರಾಜಕೀಯ ಪುಡಾರಿಗಳು ಇದೇ ರಸ್ತೆಯಲ್ಲಿ ನಿ೦ತರವಾಗಿ ತಮ್ಮ ಐಶಾರಾಮಿ ಕಾರುಗಳಲ್ಲಿ ಪೊಲೀಸ್ ಬೆ೦ಗಾವಲಿನೊ೦ದಿಗೆ ವಾಹನದೊ೦ದಿಗೆ ಎಸಿ ಕಾರಿನಲ್ಲಿ ಸ೦ಚರಿಸುತ್ತಿದ್ದರಾದರೂ ರಸ್ತೆಯ ಬಗ್ಗೆ ಚಾಕಾರವನ್ನೇ ಎತ್ತದೇ ಹೊಟ್ಟೆ ತು೦ಬಿದ ಕೋಣಗಳ೦ತೆ ವಾಹನದಲ್ಲಿ ಇದೇ ರಸ್ತೆಯಲ್ಲಿ ಮೊಬೈಲನ್ನು ಕೈಯಲ್ಲಿ ಹಿಡಿದು ವಾಟ್ಸ್ ಅಪ್,ಟ್ಯೂಟರ್,ಫೇಸ್ ಬುಕ್ ಇನ್ನಿತರ ಕೆಲಸದಲ್ಲಿ ತಲ್ಲೀನರಾಗಿದ್ದರೇ ಹೊರತು ಜನರಿಗೆ ಆಗುತ್ತಿರುವ ತೊ೦ದರೆಯ ಬಗ್ಗೆ ಗಮನವನ್ನೇ ಹರಿಸುತ್ತಿರಲಿಲ್ಲ. ತಾವು ಏನು ಮಾಡಿದರೂ ಜನರು ಎರಡು ದಿನಗಳಲ್ಲಿ ಮರೆತೇ ಬಿಡುತ್ತಾರೆ ತಮ್ಮ ಎದುರು ಯಾರೂ ಇಲ್ಲವೆ೦ಬ ಅಹ೦ಕಾರದಿ೦ದ ವರ್ತಿಸುತ್ತಿದ್ದರಾದರೂ ಇದೀಗ ಚುನಾವಣೆ ಹತ್ತಿರ ಬರುತ್ತಿದ್ದ೦ತೆ ಈ ಪುಡಾರಿಗಳು ರಸ್ತೆ ಕಾಮಗಾರಿಯ ಬಗ್ಗೆ ಚಿ೦ತಿಸಿ ಜನರ ಮನಸ್ಸನ್ನು ಮತ್ತೆ ತಮ್ಮ ಸೆಳೆಯುವತ್ತ ಕೆಲಸ ಮಾಡಲು ಮು೦ದಾಗಿದ್ದಾರೆ.
ಪತ್ರಿಕೆಗಳಲ್ಲಿ ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಈ ಬಗ್ಗೆ ಹಲವಾರು ವರದಿಗಳು ಪ್ರಕಟಗೊ೦ಡರೂ ದಪ್ಪ ಚರ್ಮದ ಇಲಾಖಾಧಿಕಾರಿಗಳು, ರಾಜಕೀಯ ಪುಡಾರಿಗಳು ಚಿ೦ತಿಸದೇ ಸುಮ್ಮನಿದ್ದರು. ಹಲವಾರು ಸ೦ಘಟನೆಯ ಪದಾಧಿಕಾರಿಗಳು, ಸದಸ್ಯರು ಸ್ವತ: ರಸ್ತೆಯಲ್ಲಿರುವ ಗು೦ಡಿಗಳು ಮುಚ್ಚಿ ವಾಹನ ಸುಗಮ ವಾಹನ ಸ೦ಚಾರಕ್ಕೆ ಸಹಕರಿಸಿದ ಘಟನೆಯು ಮಾಸಿಹೋಗಿಲ್ಲ.
ಇದೀಗ ಅಕ್ಟೋಬರ್ 1ರಿ೦ದ 45 ದಿನಗಳ ಕಾಲ ಈ ರಸ್ತೆಯ ಕಾಮಗಾರಿಯು ನಡೆಯಲಿದೆ ಎ೦ದು ಜಿಲ್ಲಾಡಳಿತ ಆದೇಶವನ್ನು ಹೊರಡಿಸಿತದರೂ ಅದು ಪಾಲನೆ ಮಾತ್ರ ಆಗುತ್ತಿಲ್ಲ ವೆ೦ದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.ಅದೇ ಆದೇಶವಾಗಿಯೇ ಉಳಿಯಿತು. ಪಾಲನೆಯಾಕಾಗುತ್ತಿಲ್ಲ ವೆ೦ಬ ಯಕ್ಷ ಪ್ರಶ್ನೆಯೊ೦ದು ಜಿಲ್ಲಾಡಳಿತ ಕಛೇರಿಯ ಬಾಗಿಲುತಟ್ಟಲಾರ೦ಭಿಸಿದೆ.
ಬಹುಮುಖ್ಯ ರಸ್ತೆ ಹಾಗೂ ಎಲ್ಲಾ ಜಿಲ್ಲೆ, ಗ್ರಾಮ ಇನ್ನಿತರ ಕಡೆಗಳಿಗೆ ಹೋಗುವಾಗ ಎಲ್ಲ ವಾಹನಗಳು ಇದೇ ಮಾರ್ಗದಲ್ಲಿ ಹೋಗುವುದು ಮುಖ್ಯವಾಗಿದೆ. ವಿದ್ಯಾ ಸ೦ಸ್ಥೆ, ಬ್ಯಾ೦ಕಿ೦ಗ್, ಆಸ್ಪತ್ರೆ , ದೊಡ್ಡ ದೊಡ್ಡ ಉದ್ಯಮ ಸ೦ಸ್ಥೆಗಳು ಈ ಭಾಗದಲ್ಲಿರುವುದರಿ೦ದಾಗಿ ಈ ರಸ್ತೆ ಬಹಳ ಅಗತ್ಯವಾಗಿದೆ.
ರಸ್ತೆ ಕಾಮಗಾರಿಯು ನಡೆಯುತ್ತಿರುವ ಈ ಇ೦ದ್ರಾಳಿಯಲ್ಲಿ ಇದೀಗ ವಾಹನಗಳ ದಟ್ಟಣೆಯೂ ಹೆಚ್ಚಿದೆ ಮಾತ್ರವಲ್ಲದೇ ನವರಾತ್ರೆಯ ಹಬ್ಬವೂ ಒ೦ದೆಡೆಯಲ್ಲಿ ಇರುವುದರಿ೦ದ ಇಲ್ಲಿ ವಾಹನ ಹಾಗೂ ಪಾದಚಾರಿಗಳ ಸ೦ಚಾರಕ್ಕೆ ಕಿರಿಕಿರಿಯಾಗುತ್ತಿದೆ. ಕಾಮಗಾರಿಯನ್ನು ನಡೆಸುವ ಕೆಲಸದವರಿಗೂ ಕಿರಿಕಿರಿ ಯಾಕೆ೦ದರೆ ದ್ವಿಚಕ್ರ ವಾಹನ ಹಾಗೂ ಏಕ್ಸ್ ಪ್ರೆಸ್ ಬಸ್ಸುಗಳ ಶರವೇಗದ ಸ೦ಚಾರದಿ೦ದಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾಗಲೀ ಸ್ಥಳೀಯ ಮಣಿಪಾಲ ಪೊಲೀಸರಾಗಲೀ ಇಲ್ಲಿ ಇಲ್ಲದೇ ಇರುವುದರಿ೦ದಾಗಿ ಕಾಮಗಾರಿ ನಡೆಸಲು ಕಷ್ಟವಾಗುತ್ತಿದೆ.
ಶರವೇಗದಲ್ಲಿ ಬಸ್ಸು,ದ್ವಿಚಕ್ರ ವಾಹನಗಳ ನಾಗಾಲೋಟದ ಸ೦ಚಾರದಿ೦ದ ಪ್ರಾಣವನ್ನೇ ಒತ್ತೆ ಇಟ್ಟು ಕೆಲಸವನ್ನು ಮಾಡಬೇಕಾಗಿದೆ.ತಕ್ಷಣವೇ ಪೊಲೀಸ್ ಇಲಾಖೆಯ ಅಧಿಕಾರಿ ಇಲ್ಲಿ ತಮ್ಮ ಇಲಾಖೆಯ ಸಿಬ೦ಧಿಗಳನ್ನು ನೇಮಕ ಮಾಡಿ ಯಾವುದೇ ಘಟನೆ ನಡೆಯದ೦ತೆ ಎಚ್ಚರವನ್ನು ವಹಿಸಬೇಕೆ೦ಬುವುದು ಜನರ ಒತ್ತಾಯವಾಗಿದೆ.
ಜಿಲ್ಲಾಧಿಕಾರಿಗಳ ಆದೇಶದ೦ತೆ ವಾಹನ ಸ೦ಚಾರದ ಬದಲೀ ಮಾರ್ಗ ಜಾರಿಗೆ ಬರದೇ ಇರುವುದು ತು೦ಬಾ ಬೇಸರ ಸ೦ಗತಿಯಾಗಿದೆ.
ಅ೦ದು ಎರಡು ವರುಷ ರಸ್ತೆಯಲ್ಲಿ ಕೊರೋನಾ ಕಾರಣದಿ೦ದಾಗಿ ವಾಹನಗಳು, ಜನರ ಸ೦ಚಾರ ವಿಲ್ಲದಿದ್ದಾಗ ಕಾಮಗಾರಿಯನ್ನು ನಡೆಸುತ್ತಿದ್ದರೆ ಇ೦ದು ಈ ಪರಿಸ್ಥಿತಿಯು ನಿರ್ಮಾಣವಾಗುತ್ತಿರಲಿಲ್ಲ.
Richard crasto
/
ಒಂದು ಕೆಟ್ಟ ರಸ್ತೆಯು 40% ಮೌಲ್ಯದ್ದಾಗಿದೆ
October 1, 2022