Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ವಿದ್ಯೋದಯ ಪದವಿ ಪೂರ್ವಕಾಲೇಜು: ಮಾದಕದ್ರವ್ಯ ವ್ಯಸನಮುಕ್ತ ಸಮಾಜ ನಿರ್ಮಾಣ–ಉಪನ್ಯಾಸಕಾರ್ಯಕ್ರಮ

ಉಡುಪಿ:ವಿದ್ಯೋದಯಟ್ರಸ್ಟ್ (ರಿ.)ನ ಅಂಗಸಂಸ್ಥೆ ವಿದ್ಯೋದಯ ಪದವಿಪೂರ್ವಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಮಾದಕದ್ರವ್ಯ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವ ಬಗ್ಗೆ ಉಪನ್ಯಾಸಕಾರ್ಯಕ್ರಮಜರುಗಿತು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಉಡುಪಿ, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಮತ್ತು ವಿದ್ಯೋದಯ ಪದವಿ ಪೂರ್ವಕಾಲೇಜಿನ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು 29 ಸೆಪ್ಟೆಂಬರ್ 2022ರಂದು ಆಯೋಜಿಸಲಾಗಿತ್ತು.

ಶ್ರೀಮತಿ ಶರ್ಮಿಳಾ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಉಡುಪಿ ಇವರುಕಾರ್ಯಕ್ರಮ ಉದ್ಘಾಟಿಸಿ, ಪ್ರಸ್ತಾವನೆಗೈದರು.

ಡಾ| ಸುನಿಲ್, ವೈದ್ಯರು, ಎ.ವಿ. ಬಾಳಿಗ ಆಸ್ಪತ್ರ್ರೆ, ಉಡುಪಿ ಇವರು ಮಾದಕದ್ರವ್ಯ ವ್ಯಸನ ಮತ್ತು ದುಷ್ಪರಿಣಾಮಗಳ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳು ಇದರ ವಿಷ ವರ್ತುಲದೊಳಗೆ ಸಿಗದಂತೆ ಜಾಗರೂಕರಾಗಬೇಕೆಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್‍ಕುಮಾರ್ ಸ್ವಾಗತಿಸಿ ಧನ್ಯವಾದ ಅರ್ಪಿಸಿದ ಈ ಕಾರ್ಯಕ್ರಮದಲ್ಲಿಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯಉಪನಿರ್ದೇಶರಾದ ಮಾರುತಿ, ಮತ್ತುಕಾಲೇಜಿನಉಪಪ್ರಾಂಶುಪಾಲೆಶ್ರೀಮತಿ ರಂಜನಾ ಕೆ. ಉಪಸ್ಥಿತರಿದ್ದರು.

No Comments

Leave A Comment