Log In
BREAKING NEWS >
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಫ್ಲೈಓವರ್‌ ಮೇಲೆ ಹುಟ್ಟುಹಬ್ಬ ಆಚರಿಸಿದ್ದಕ್ಕಾಗಿ 21 ಜನರ ಬಂಧನ, 8 ಐಷಾರಾಮಿ ಕಾರುಗಳು ವಶಕ್ಕೆ

ಗಾಜಿಯಾಬಾದ್: ದೆಹಲಿ ಸಮೀಪದ ಫ್ಲೈಓವರ್ ಮೇಲೆ ಹುಟ್ಟುಹಬ್ಬ ಆಚರಿಸಿ ಗಲಾಟೆ ಸೃಷ್ಟಿಸಿದ ಆರೋಪದ ಮೇಲೆ ಎಂಟು 21 ಜನರನ್ನು ಬಂಧಿಸಲಾಗಿದ್ದು, 8 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಂದಿರಾಪುರಂ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಆರೋಪಿಗಳು ಮಂಗಳವಾರ ಮಧ್ಯರಾತ್ರಿ ಪೂರ್ವ ದೆಹಲಿಯ ಜಗತ್ ಪುರಿ ನಿವಾಸಿ ಅಂಶ್ ಕೊಹ್ಲಿ (21) ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು ಎಂದು ಹೇಳಲಾಗಿದೆ.

ಫ್ಲೈಓವರ್ ಮೇಲೇರಿದ್ದ ಯುವಕರ ತಂಡ ಕಾರಿನ ಬಾನೆಟ್ ಮೇಲೆ ಕೇಕ್ ಕತ್ತರಿಸಿ ಜೋರಾಗಿ ಸಂಗೀತ ನುಡಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಆರೋಪಿಗಳು ತಮ್ಮ ಕಾರನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ಮೂಲಕ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟುಮಾಡಿದ್ದರು. ಈ ವೇಳೆ ಅವರು ಇತರ ಪ್ರಯಾಣಿಕರಿಗೆ ನಿಂದನೀಯ ಭಾಷೆಯನ್ನು ಬಳಸುತ್ತಿದ್ದರು’ ಎಂದು ನಗರದ ಎರಡನೇ ಎಸ್‌ಪಿ ಜ್ಞಾನೇಂದ್ರ ಸಿಂಗ್ ಹೇಳಿದ್ದಾರೆ.

ಸದ್ಯ ಎಲ್ಲಾ 21 ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment