Log In
BREAKING NEWS >
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ರಾಜ್ಯ ಕಾ೦ಗ್ರೆಸ್ ನ ಮಾಧ್ಯಮ-ಸಂವಹನ ವಿಭಾಗದ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಅಮೃತ್ ಶೆಣೈ ನೇಮಕ

ಉಡುಪಿ:ಉಡುಪಿಯ ಜಿಲ್ಲಾ ಕಾ೦ಗ್ರೆಸ್ ಅಮೃತ್ ಶೆಣೈಯವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಮಾಧ್ಯಮ ಹಾಗೂ ಸಂವಹನ ವಿಭಾಗದ ರಾಜ್ಯ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿ ಆಗಿ ನೇಮಕಮಾಡಲಾಗಿದೆ.

ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶ ಉಡುಪಿ ಚಿಕ್ಕಮಗಳೂರು ಲೋಕಸಭಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಉಡುಪಿ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಮಂಗಳೂರು ವಿ ವಿ ಶೈಕ್ಷಣಿಕ ಸಮಿತಿ ಸದಸ್ಯ ಅಖಿಲ‌ ಭಾರತ ಕಾಂಗ್ರೆಸ್ ಸಮಿತಿ ಸದಸ್ಯ ಇತ್ಯಾದಿ ಹುದ್ದೆಗಳನ್ನು ಈ ಹಿಂದೆ ಅಲಂಕರಿಸಿದ ಶೆಣೈ ಯವರು ಅದಲ್ಲದೇ ಸಹಬಾಳ್ವೆ ,ಉಡುಪಿ, ಸೌತ್ ಶಾಲಾ ಹಳೆ ವಿದ್ಯಾರ್ಥಿ ಸಂಘ ,ಹೀಗೆ ಅನೇಕ ಸಾಮಾಜಿಕ ಸಂಸ್ಥೆ ಗಳಲ್ಲಿ ಮುಂದಾಳತ್ವ ಹೊತ್ತು ಕೆಲಸ ಮಾಡಿದವರು.

ಕರ್ನಾಟಕ ‌ಪ್ರದೇಶ ಕಾಂಗ್ರೆಸ್ ಸಮಿತಿಯ ವಾರ್ ರೂಮ್ ನ ಸದಸ್ಯ ಆಗಿ ಉಡುಪಿ ಜಿಲ್ಲಾ ಕೋ ಆರ್ಡಿನಟರ್, ಸಂಚಾಲಕ ಆಗಿ ಸೇವೆ ಸಲ್ಲಿಸುವ ಅವಕಾಶವನ್ನು ಅಧ್ಯಕ್ಷರಾದ ಸನ್ಮಾನ್ಯ ಡಿ ಕೆ ಶಿವಕುಮಾರ ರವರು ನೇಮಿಸದ್ದಾರೆ ಅದರ ಜತೆಗೇನೆ ಕೆಪಿಸಿಸಿ ಮಾಧ್ಯಮ‌ ಹಾಗೂ ಸಂವಹನ ಸಮಿತಿ ರಾಜ್ಯಾಧ್ಯಕ್ಷರಾದ ಪ್ರಿಯಾಂಕ ಖರ್ಗೆ ಯವರು ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾಡಿ ನೇಮಿಸಿದ‌ ಹೊಚ್ಚ ಹೊಸ ಸಮಿತಿಯನ್ನೂ ಸನ್ಮಾನ್ಯ ಡಿ ಕೆ ಶಿವಕುಮಾರ್ ರವರು ಅನುಮೋದಿಸಿದ್ದಾರೆ.

ಯಾವುದೇ ನಿರ್ದಿಷ್ಟ ಹುದ್ದೆ ಜವಾಬ್ದಾರಿ ಇಲ್ಲದಿದ್ದರೂ ಕಾಂಗ್ರೆಸ್ ಪರ ನಿಷ್ಠೆ ಯಿಂದ ಕೆಲಸ ಮಾಡುತ್ತಿದ್ದ ತನಗೆ ಇಂದಿನಿಂದ ನಿರ್ಧಿಷ್ಟವಾದ ಜವಾಬ್ದಾರಿ ಗಳು ಸಿಕ್ಕಿದ್ದು ಸಂತೋಷ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಡಿ ಕೆ ಶಿವಕುಮಾರ್ ರವರಿಗೆ,ಪ್ರಿಯಾಂಕಖರ್ಗೆಯವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ ಅವರು ಕಾಂಗ್ರೆಸ್ ನ ಕಟ್ಟಕಡೆಯ ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ಪಡೆದು ಈ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ ಎಂದೂ ತಿಳಿಸಿದರು.

No Comments

Leave A Comment