Log In
BREAKING NEWS >
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಮನೆ ಬಾಗಿಲಿನ ಬೀಗ ಮುರಿದು ನುಗ್ಗಿದ ಕಳ್ಳರು : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕದ್ದು ಪರಾರಿ

ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕಿನ ಬಡಗಕಾರಂದೂರು ಗ್ರಾಮದ ಅಳದಂಗಡಿ ಸುಂಕದಕಟ್ಟೆ ಎಂಬಲ್ಲಿ ಕಳ್ಳರು‌ ಬೀಗ ಮುರಿದು ಮನೆಯೊಳಗೆ ಪ್ರವೇಶಿಸಿ ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಎಗರಿಸಿದ ಘಟನೆಯೊಂದು ರಾತ್ರಿ ವೇಳೆ ನಡೆದಿದೆ.

ವ್ಯಕ್ತಿಯೋರ್ವರು ವಾಸವಿರುವ ಮನೆಯ ಬಾಗಿಲಿನ ಬೀಗವನ್ನು ದರೋಡೆಕೋರರು ಮುರಿದು ಒಳ ಪ್ರವೇಶಿಸಿ ಮನೆಯ ಬೆಡ್‌ ರೂಂನಲ್ಲಿ ಇದ್ದ ಕಪಾಟನ್ನು ತೆರೆದು ಅದರಲ್ಲಿ ಇದ್ದ ಸುಮಾರು ಎರಡೂವರೆ ತೂಕದ ಚಿನ್ನದ ಸರ, ಸುಮಾರು ಎರಡೂವರೆ ಪವನ್‌ ತೂಕದ 2 ಬ್ರಾಸ್‌ಲೈಟ್‌ಗಳು, ಸುಮಾರು 1 ಪವನ್‌ ತೂಕದ 2 ಜೊತೆ ಸಣ್ಣ ಕಿವಿಯೋಲೆಗಳು ಹಾಗೂ ಅವರ ತಾಯಿಯ ಸುಮಾರು ಎರಡೂವರೆ ತೂಕದ ಚಿನ್ನದ ಸರವನ್ನು ಹಾಗೂ ನಗದು ರೂ 15,000/- ಮತ್ತು ರೂ 10,000/- ಗಳನ್ನು ಕಳವು ಮಾಡಿದ್ದು ಒಟ್ಟು ರೂ. 2,97,000 ಮೌಲ್ಯದ ಆಭರಣ ಕಳವಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ವೇಣೂರು ಉಪನಿರೀಕ್ಷಕರು ಸೌಮ್ಯ ಹಾಗೂ ಸಿಬ್ಬಂದಿ ವರ್ಗದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

No Comments

Leave A Comment