Log In
BREAKING NEWS >
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಉತ್ತರಾಖಂಡ್ : ಯುವತಿಯ ಹತ್ಯೆ ಪ್ರಕರಣ : ಬಿಜೆಪಿ ನಾಯಕನ ಪುತ್ರನ ಬಂಧನ

ಉತ್ತರಾಖಂಡ್: ರಿಷಿಕೇಶ್ ನಲ್ಲಿ ವನ್ ತಾರಾ ರೆಸಾರ್ಟ್ ನ ಸ್ವಾಗತಗಾರ್ತಿಯ ಹತ್ಯೆ ಪ್ರಕರಣದಲ್ಲಿ ಮೂವರು ಬಂಧನಕ್ಕೊಳಗಾಗಿದ್ದು, ಈ ಪೈಕಿ ಓರ್ವ ಬಿಜೆಪಿಯ ನಾಯಕರ ಮಗನೂ ಇದ್ದಾರೆ ಎಂದು ತಿಳಿದು ಬಂದಿದೆ.

ರೆಸಾರ್ಟ್ ನ ಸ್ವಾಗತಗಾರ್ತಿ ಅಂಕಿತಾ ಕಳೆದ 5 ದಿನಗಳಿಂದ ನಾಪತ್ತೆಯಾಗಿದ್ದರು, ಆಕೆಯನ್ನು ರೆಸಾರ್ಟ್ ನ ಮಾಲಿಕ ಹಾಗೂ ಕಾರ್ಯನಿರ್ವಾಹಕರು ಹತ್ಯೆ ಮಾಡಿದ್ದರು ಎನ್ನಲಾಗಿದೆ.

ಅಂಕಿತ ಸಾಯುತ್ತಿರುವ ಸಂದರ್ಭದಲ್ಲಿ ಪೊಲೀಸರೆದುರು ಹೇಳಿಕೆ ನೀಡಲು ಸಾಧ್ಯವಾಗಲಿಲ್ಲವಾದರೂ ಜಮ್ಮುವಿನಲ್ಲಿದ್ದ ಸ್ನೇಹಿತರೊಂದಿಗಿನ ಆಕೆಯ ವಾಟ್ಸ್ ಆಪ್ ಚಾಟ್ ಸಂವಹನಗಳು ರೆಸಾರ್ಟ್ ನಿರ್ವಾಹಕರ ದೌರ್ಜನ್ಯದ ಕಥೆಯನ್ನು ಬಿಚ್ಚಿಡುತ್ತಿವೆ.

ಶ್ರೀಕೋಟ್ ಗ್ರಾಮದ ಅಂಕಿತ ಭಂಡಾರಿ ಎಂಬ ಯುವತಿ ರಿಷಿಕೇಶ್ ನ ವನ್ ತಾರಾ ರೆಸಾರ್ಟ್ ನಲ್ಲಿ ಸ್ವಾಗತಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು, ಆಕೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಈ ಪ್ರಕರಣವನ್ನು ಅನುಮಾನಾಸ್ಪದವಾಗಿ ಪರಿಗಣಿಸಿದ ಡಿಜಿಪಿ ಅಶೋಕ್ ಕುಮಾರ್, ರೆಸಾರ್ಟ್ ನ ಸಿಬ್ಬಂದಿಯ ವಿಚಾರಣೆ, ಹಾಗೂ ಸಿಸಿಟಿವಿ ಫುಟೇಜ್ ಗಳನ್ನು ಪರಿಶೀಲಿಸಲು ಮುಂದಾದರು, ಇಲ್ಲಿಂದ ಲಭ್ಯವಾದ ಮಾಹಿತಿಯ ಆಧಾರದಲ್ಲಿ ಪುಲ್ಕಿತ್ ಆರ್ಯ, ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರನೂ ಇದ್ದಾರೆ.

ಮೂವರನ್ನೂ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಂಕಿತ್ ಅಲಿಯಾಸ್ ಪುಲ್ಕಿತ್ ಗುಪ್ತಾ, ಸೌರಭ್ ಭಾಸ್ಕರ್ ಹಾಗೂ ಪುಲ್ಕಿತ್ ಆರ್ಯ ಬಂಧಿತ ಆರೋಪಿಗಳಾಗಿದ್ದಾರೆ.

“ಸೆ.18 ರಂದು ಸಂಜೆ ಪುಳ್ಕಿತ್ ಹಾಗೂ ಅಂಕಿತ ಅವರು ರೆಸಾರ್ಟ್ ನಲ್ಲಿದ್ದಾಗ ನಿರ್ದಿಷ್ಟ ವಿಚಾರಕ್ಕೆ ವಾಗ್ವಾದ ಆರಂಭವಾಗಿದೆ. ಆ ಬಳಿಕ ಪುಲ್ಕಿತ್ ಅಂಕಿತಾಳನ್ನು ಮನಸು ಬದಲಾಯಿಸುವುದಕ್ಕಾಗಿ ತನ್ನೊಂದಿಗೆ ಕರೆದೊಯ್ದಿದ್ದಾರೆ. ಸ್ನೇಹಿತರೆಲ್ಲರೂ ಏಮ್ಸ್ ಗೆ ತೆರಳಿದ್ದಾರೆ. ಅಲ್ಲಿ ಮತ್ತೆ ಅಂಕಿತಾ ಹಾಗೂ ಪುಳ್ಕಿತ್ ನಡುವೆ ಮತ್ತೆ ವಾಗ್ವಾದ ಉಂಟಾಗಿದೆ.

ಅಂಕಿತಾ ಸಹೋದ್ಯೋಗಿಗಳೆದುರು ನಮ್ಮನ್ನು ಅವಮಾನ ಮಾಡುತ್ತಿದ್ದರು, ನಮ್ಮ ವಿಷಯಗಳನ್ನು ಅವರ ಸಹೋದ್ಯೋಗಿಗಳಿಗೆ ಹೇಳುತ್ತಿದ್ದರು.”  ನಾವು, ಆಕ್ರೋಶಗೊಂಡು ಅಂಕಿತಾ ಅವರೊಂದಿಗೆ ಜಗಳವಾಡುತ್ತಿದ್ದಾಗ ಆಕೆ ನಮ್ಮನ್ನು ಥಳಿಸಲು ಮುಂದಾದಳು, ನಾವು ಕೋಪದಲ್ಲಿ ಆಕೆಯನ್ನು ತಳ್ಳಿದೆವು ಆಕೆ ಕಾಲುವೆಗೆ ಬಿದ್ದಳು ಎಂದು ಹೇಳಿಕೆ ನೀಡಿದ್ದಾರೆ.

 

ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ

No Comments

Leave A Comment