Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಪೇಟಿಎಂ ಮಾದರಿಯಲ್ಲಿ ʻಪೇ ಸಿಎಂʼ ಪೋಸ್ಟರ್‌ ವೈರಲ್‌; ಬಿಜೆಪಿ ಭ್ರಷ್ಟಾಚಾರ ವಿರುದ್ಧ ಕ್ಯೂ ಆರ್ ಕೋಡ್ ಸಹಿತ ಕಾಂಗ್ರೆಸ್ ಅಭಿಯಾನ

ಬೆಂಗಳೂರು: ಬಿಜೆಪಿ ಹಾಗೂ ‌ಕಾಂಗ್ರೆಸ್ ನಡುವೆ QR ಕೋಡ್ ಜಟಾಪಟಿ ಶುರುವಾಗಿದೆ. 40% ಕಮಿಷನ್ ಆರೋಪ ಮುಂದಿಟ್ಟುಕೊಂಡು ಪೇ ಸಿಎಂ  ಎಂದು ಪೇಟಿಎಂ ಮಾದರಿಯಲ್ಲಿ ರಚಿಸಲಾಗಿರುವ ಪೋಸ್ಟರ್ ನಗರದ ಹಲವು ಕಡೆಗಳಲ್ಲಿ ಹಾಕಲಾಗಿತ್ತು

ಬೆಂಗಳೂರು ನಗರದ ವಿವಿಧೆಡೆ ಮುಖ್ಯಮಂತ್ರಿ ಚಿತ್ರ ಸಹಿತ ಈ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ರಾಜ್ಯ ಸರ್ಕಾರದ ವಿರುದ್ಧದ ದೂರುಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಘಟಕ ಇತ್ತೀಚೆಗೆ ಬಿಡುಗಡೆ ಮಾಡಿದ ‘ಶೇ 40 ಕಮಿಷನ್ ಸರ್ಕಾರ’ ವೆಬ್ ಸೈಟ್ ತೆರೆದುಕೊಳ್ಳಲಿದೆ.

ನಗರದ ಜಯಮಹಲ್‌ ರಸ್ತೆ, ಇಂಡಿಯನ್ ಎಕ್ಷ್‌ಪ್ರೆಸ್‌ ಬಳಿ ಗೋಡೆಗೆ ಪೇ ಸಿಎಂ ಎಂದು ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವಿರುವ ಪೋಸ್ಟರ್‌ ಅಂಟಿಸುವ ಮೂಲಕ ಭ್ರಷ್ಟ ಸರ್ಕಾರ ಎಂದು ಅಣಕಿಸಲಾಗಿದೆ. 40% accepted here ಎಂದು ಪೋಸ್ಟರ್‌ನಲ್ಲಿ ಒಕ್ಕಣೆ ಬರೆಯಲಾಗಿದೆ.

ಪೇಟಿಎಂ ಮಾದರಿಯಲ್ಲಿ ಪೇ ಸಿಎಂ ಎಂದು ಕ್ಯೂಆರ್ ಕೋಡ್ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ‌ ಫೋಟೋ ಹಾಕಲಾಗಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪದ ದೂರು ನೀಡಲು ಸಹಾಯವಾಣಿ ನಂಬರ್ ಹಾಕಿರುವ ಪೋಸ್ಟರ್‌ನ್ನು ಬೆಂಗಳೂರಿನ ಹಲವೆಡೆ ಅಂಟಿಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದ ಬಳಿಯೂ ಪೋಸ್ಟರ್ ಹಾಕಲಾಗಿದೆ.

ಇದನ್ನು ಸ್ಕ್ಯಾನ್‌ ಮಾಡಿದರೆ 40% ಸ್ಕ್ಯಾಮ್ ಸ್ಟಾರ್ಸ್ ಎನ್ನುವ ಪೇಜ್‌ ಓಪನ್‌ ಆಗುತ್ತದೆ. ರೋಡ್ ಸ್ಕ್ಯಾಮ್, ಬಿಟ್‌ಕಾಯಿನ್ ಸ್ಕ್ಯಾಮ್, ಪಿಎಸ್‌ಐ ಸ್ಕ್ಯಾಮ್ ಎನ್ನುವ ಪೇಜ್‌ ಬರುತ್ತದೆ. ಸ್ಕ್ಯಾನ್ ಮಾಡಿದವರ ಸಂಖ್ಯೆ ಇಲ್ಲಿಯವರೆಗೆ 95,428 ಆಗಿದೆ. ಸ್ಕ್ಯಾನ್ ಮಾಡಿದ ಕೂಡಲೇ ಅಭಿಯಾನಕ್ಕೆ ಆ್ಯಡ್ ಆಗಿದ್ದೀರಿ ಎಂದು ಮೆಸೇಜ್ ಬರುತ್ತದೆ.

No Comments

Leave A Comment