Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ರೋಡ್ ಡಿವೈಡರ್ ನಲ್ಲಿ ಮಲಗಿದ್ದವರ ಮೇಲೆ ಹರಿದ ಟ್ರಕ್: ನಾಲ್ವರ ದಾರುಣ ಸಾವು; ವಾಹನ ಸಮೇತ ಚಾಲಕ ನಾಪತ್ತೆ

ನವದೆಹಲಿ: ದೆಹಲಿಯಲ್ಲಿ ಮಂಗಳವಾರ ತಡರಾತ್ರಿ ರಸ್ತೆ ಬದಿಯಲ್ಲಿ ಮಲಗಿದ್ದವರ ಮೇಲೆ ಟ್ರಕ್​ ಹರಿದು ನಾಲ್ವರು ಮೃತಪಟ್ಟು, ಮೂರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಸೀಮಾಪುರಿ ಎಂಬಲ್ಲಿ ರಸ್ತೆ ವಿಭಜಕದ ಮೇಲೆ  ಆರು ಮಂದಿ ಮಲಗಿದ್ದರು.

ವೇಗವಾಗಿ ಬಂದ ಟ್ರಕ್​ ಅವರ ಮೇಲೆ ಹಾದು ಹೋಗಿದೆ. ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ. ನಾಲ್ಕು ಮಂದಿಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬಾತ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯಲ್ಲಿ ಮೃತಪಟ್ಟಿದ್ದಾನೆ.  ಮತ್ತೊಬ್ಬ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ.

ಮೃತರನ್ನು ಕರೀಂ(52), ಚೋಟ್ಟೆ ಖಾನ್ಸ್(25), ಶಾ ಆಲಂ(38) ಮತ್ತು ರಾಹುಲ್(45) ಎಂದು ಗುರುತಿಸಲಾಗಿದೆ. ಮನೀಶ್(16) ಮತ್ತು ಪ್ರದೀಪ್(30) ಗಾಯಗೊಂಡವರು. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ವಾಹನದ ಪತ್ತೆಗೆ ಪೊಲೀಸರು ಹಲವು ತಂಡಗಳನ್ನು ರಚಿಸಿದ್ದಾರೆ.

No Comments

Leave A Comment