ಮೊದಲ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾಗೆ ಭರ್ಜರಿ ಜಯ
ಮೊಹಾಲಿ: ಮೊದಲ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ 4 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.
ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆಸೀಸ್ ಗೆ ಗೆಲ್ಲಲು 209 ರನ್ ಗುರಿ ನೀಡಿತ್ತು. 209 ರನ್ಗಳ ಗುರಿಯನ್ನು 19.2 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಚೇಸ್ ಮಾಡುವ ಮೂಲಕ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ.
ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರ ಆರನ್ ಫಿಂಚ್ (13 ಎಸೆತಗಳಲ್ಲಿ 22 ರನ್) ಕ್ಯಾಮರೂನ್ ಗ್ರೀನ್ (30 ಎಸೆತಗಳಲ್ಲಿ 61 ರನ್) ಸ್ಟೀವನ್ ಸ್ಮಿತ್ (24 ಎಸೆತಗಳಲ್ಲಿ 35 ರನ್) ಗಳ ಮೂಲಕ ಆಸ್ಟ್ರೇಲಿಯಾಗೆ ರನ್ ಚೇಸಿಂಗ್ ಗೆ ಭದ್ರ ಬುನಾದಿ ಹಾಕಿಕೊಟ್ಟರು. ಆಸ್ಟ್ರೇಲಿಯಾ ಪರ ಬೌಲಿಂಗ್ ನಲ್ಲಿ ನಾಥನ್ ಇಲ್ಲಿಸ್ 3, ಹೆಜಲ್ವುಡ್ 2 ಹಾಗೂ ಕ್ಯಾಮರೊನ್ ಗ್ರೀನ್ 1 ವಿಕೆಟ್ ಪಡೆದರೆ, ಭಾರತದ ಪರ ಉಮೇಶ್ ಯಾದವ್ 2 ವಿಕೆಟ್, ಅಕ್ಸರ್ ಪಟೇಲ್ 3, ಯಜುವೇಂದ್ರ ಚಹಾಲ್ 1 ವಿಕೆಟ್ ಪಡೆದರು.