Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳನ್ನು ಹೊರಗೆ ಬಿಟ್ಟ ಪ್ರಧಾನಿ ಮೋದಿ: ಕೆಲ ತಿಂಗಳು ತೀವ್ರ ನಿಗಾ

ಗ್ವಾಲಿಯರ್(ಮಧ್ಯ ಪ್ರದೇಶ): ನೈರುತ್ಯ ಆಫ್ರಿಕಾದ ನಮೀಬಿಯಾ ದೇಶದಿಂದ ಇಂದು ಶನಿವಾರ ವಿಶೇಷ ವಿಮಾನದಲ್ಲಿ ಕರೆತರಲಾದ ಚೀತಾವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಹೊರಗೆ ಕಾಡಿಗೆ ಬಿಟ್ಟಿದ್ದಾರೆ.

ಕುನೋ ಉದ್ಯಾನವನದಲ್ಲಿ 8 ಚೀತಾಗಳನ್ನು ಹೊರಗೆ ಬಿಟ್ಟ ನಂತರ ಪ್ರಧಾನ ಮಂತ್ರಿಗಳು ತಮ್ಮ ಕ್ಯಾಮರಾದಲ್ಲಿ ಅವುಗಳು ಅಡ್ಡಾಡುವುದನ್ನು ಸೆರೆಹಿಡಿದು ಸಂಭ್ರಮಿಸಿದ್ದಾರೆ.

ಈ ಮೂಲಕ ನಮೀಬಿಯಾದ 5 ಹೆಣ್ಣು ಮತ್ತು 3 ಗಂಡು ಚೀತಾಗಳು ಸರಿಸುಮಾರು 7 ದಶಕಗಳ ನಂತರ ಭಾರತಕ್ಕೆ ಮರುಪರಿಚಯವಾಗುತ್ತಿದೆ. ಕುನೋ ಪಾರ್ಕ್ ನಲ್ಲಿ ಚೀತಾಗಳಿಗೆ ವಿಶೇಷ ಆರೈಕೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 3 ತಿಂಗಳ ಕಾಲ ತೀವ್ರ ನಿಗಾದಲ್ಲಿ ಇರಿಸಲಾಗುತ್ತದೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆಯೇ ಎಂದು ನೋಡಲಾಗುತ್ತದೆ.

ಭಾರತದ ವನ್ಯಜೀವಿ ರಕ್ಷಣೆಯಲ್ಲಿ ಸರ್ಕಾರದ ಹೊಸ ಪ್ರಯತ್ನ ಇದಾಗಿದ್ದು, ಚೀತಾಗಳು ಭಾರತಕ್ಕೆ ಹೊಂದಿಕೊಂಡರೆ ಮುಂದಿನ ಜನಾಂಗಕ್ಕೆ ಚೀತಾಗಳನ್ನು ನೋಡಲು ಅನುಕೂಲವಾಗುತ್ತದೆ.

No Comments

Leave A Comment