Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

‘ಹೊರಭಾಗದಿಂದ ಗೂಂಡಾಗಳನ್ನು ಕರೆ ತಂದು ಬಿಜೆಪಿ ಪ್ರತಿಭಟನೆ’- ಮಮತಾ ಬ್ಯಾನರ್ಜಿ ಆರೋಪ

ಕೋಲ್ಕತ್ತ, ಸೆ 15.ರೈಲುಗಳ ಮುಖಾಂತರ ರಾಜ್ಯದ ಹೊರಗಿನಿಂದ ಶಸ್ತ್ರಸಜ್ಜಿತ ಗೂಂಡಾಗಳ ಕರೆಸಿ ಪ್ರತಿಭಟನೆ ನಡೆಸಿದೆ. ಶಾಂತಿ ಕದಡುವುದೇ ಆ ಪಕ್ಷದ ಉದ್ದೇಶವಾಗಿತ್ತು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.ರ್ಯಾಲಿಯಲ್ಲಿ ಭಾಗವಹಿಸಿದವರು ಪೊಲೀಸರ‌ ಮೇಲೆರಗಿದಾಗ ಪೊಲೀಸರು ಗುಂಡಿನ ದಾಳಿ ನಡೆಸಬಹುದಾಗಿತ್ತು. ಆದರೆ ತರ್ಕಾರ ತಾಳ್ಮೆ ವಹಿಸಿದ ಪರಿಣಾಮ ಅಂತಹ ಪ್ರತಿಕ್ರಿಯೆಗಳು ನಡೆದಿಲ್ಲ ಎಂದರು.

ಶಾಂತಿಯುತ ಪ್ರತಿಭಟನೆಗೆ ನಮ್ಮ ಅಭ್ಯಂತರವಿಲ್ಲ. ಆದರೆ ಬಿಜೆಪಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದೆ. ಸಾರ್ವಜನಿಕ ಆಸ್ತಿಗೂ ತೊಂದರೆ ಉಂಟು ಮಾಡಿದೆ. ಇದು ಸಹ್ಯವಲ್ಲ. ಶಾಂತಿ ಕದಡಲು, ಹಿಂಸಾತ್ಮಕ ಘಟನೆಗೆ ಕಾರಣರಾದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದವರು ಎಚ್ಚರಿಸಿದರು.

ದುರ್ಗಾಪೂಕೆಗೆ ಕೆಲವೇ ವಾರಗಳು ಬಾಕಿ ಉಳಿದಿವೆ. ಬಿಜೆಪಿಯ ಹಿಂಸಾ ರೂಪದ ಪ್ರತಿಭಟನೆಯಿಂದಾಗಿ ವ್ಯಾಪಾರಿಗಳು ಹಾಗೂ ಜನ ಸಾಮಾನ್ಯರು ತುಂಬಾ ತೊಂದರೆ ಅನುಭವಿಸುವಂತಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

No Comments

Leave A Comment